ಯುರೋಪ್‌ನ ಬೃಹತ್ ಉಕ್ಕು ತಯಾರಿಕೆ ಸಂಸ್ಥೆಯಾದ ಟಾಟಾ ಸ್ಟೀಲ್(ಕೋರಸ್) ಕಂಪೆನಿಗೆ ಉದಯ್ ಚತುರ್ವೇದಿಯವರನ್ನು ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿಯ ಕಾರ್ಯಕಾರಿ ಸಮಿತಿಯಲ್ಲಿರುವ ಚತುರ್ವೇದಿ, ಅಕ್ಟೋಬರ್ 1ರಿಂದ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ, ಯುರೋಪ್‌ನ ಟಾಟಾ ಸ್ಟೀಲ್ ಕಂಪೆನಿಯ ವ್ಯವಸ್ಥಾಪಕರಿಗೆ ನೇರವಾಗಿ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಸ್ಟೀಲ್ ಕಂಪೆನಿ ನೂತನ ಘಟಕಗಳ ನಿರ್ಮಾಣಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಚತುರ್ವೇದಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಟಾಟಾ ಸ್ಟೀಲ್ ಅಧಿಕಾರಿಗಳು ತಿಳಿಸಿದ್ದಾರೆ.
ಚತುರ್ವೇದಿ, ಉನ್ನತ ಮಟ್ಟದ ಹಲವಾರು ಘಟಕಗಳ ನಿರ್ಮಾಣದಲ್ಲಿ ಕಾರ್ಯನಿರ್ವಹಿಸಿದ್ದು,ಅನುಭವಿ ತಂತ್ರಜ್ಞರಾಗಿದ್ದಾರೆ ಎಂದು ಟಾಟಾ ಸ್ಟೀಲ್ ಗ್ರೂಪ್ ಬಹಿರಂಗಪಡಿಸಿದೆ.
2008ರಲ್ಲಿ ಇಂಗ್ಲೆಂಡ್‌ನ ಕೋರಸ್ ಸ್ಟ್ರಿಪ್ ಪ್ರೋಡಕ್ಟ್ಸ್ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದು, ಕೋಕ್, ಸಿಂಟರ್ ಮತ್ತು ಐರಾನ್ ಮತ್ತು ಜೆಮ್‌ಶೆಡ್‌ಪುರ್‌ನಲ್ಲಿರುವ ಟಾಟಾ ಘಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ ಎಂದು ಟಾಟಾ ಅಧಿಕಾರಿಗಳು ತಿಳಿಸಿದ್ದಾರೆ.