ಲಂಡನ್ ಮೂಲದ ಎಚ್‌ಎಸ್‌ಬಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬ್ಯಾಂಕ್‌ನ ಮುಖ್ಯಸ್ಥ ಸ್ಥಾನಕ್ಕೆ ಬಡ್ತಿ ಹೊಂದುವಲ್ಲಿ ವಿಫಲವಾಗಿದ್ದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.
ಎಚ್‌ಎಸ್‌ಬಿಸಿ ಮುಖ್ಯಸ್ಥ ಸ್ಟೆಫೆನ್ ಗ್ರೀನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ಅವರ ಉತ್ತರಾಧಿಕಾರಿ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಬ್ಯಾಂಕ್‌ನ ಸಿಇಒ ಮಿಚೈಲ್ ಜಿಯೊಘೆಗನ್ ಹಿನ್ನಡೆ ಅನುಭವಿಸಿದ್ದಾರೆ.
ಎಚ್‌ಎಸ್‌ಬಿಸಿ ಇನ್‌ವೆಸ್ಟ್‌ಮೆಂಟ್ ಬ್ಯಾಕಿಂಗ್ ಆಪರೇಶನ್ಸ್ ಮುಖ್ಯಸ್ಥ ಸ್ಟುವರ್ಟ್ ಗುಲ್ಲಿವರ್, ಜಿಯೊಘೆಗನ್ ಸ್ಥಾನವನ್ನು ತುಂಬಲಿದ್ದು, ಮುಖ್ಯ ಆರ್ಥಿಕ ಅಧಿಕಾರಿಯಾದ ಡೊಗ್ಲಾಸ್ ಫ್ಲಿಂಟ್ ಬ್ಯಾಂಕ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
56 ವರ್ಷ ವಯಸ್ಸಿನ ಜಿಯೊಘೆಗನ್ 1973ರಲ್ಲಿ ಎಚ್‌ಎಸ್‌ಬಿಸಿ ಬ್ಯಾಂಕ್‌ಗೆ ಸೇರ್ಪಡೆಯಾಗಿದ್ದರು, ಕಳೆದ 2006ರಿಂದ ಎಚ್‌ಎಸ್‌ಬಿಸಿ ಹೋಲ್ಡಿಂಗ್ಸ್ ಪಿಎಲ್‌ಸಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.