ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಸುರಕ್ಷತೆಗೆ ದರ ಏರಿಕೆ ಪ್ರಮುಖ ಬೆದರಿಕೆ :ಎಫ್‌ಎಕ್ಯೂ (UN's Food and Agriculture Organisation | Price volatility | Food security)
ಆಹಾರ ಸುರಕ್ಷತೆಗೆ ದರ ಏರಿಕೆ ಪ್ರಮುಖ ಬೆದರಿಕೆ :ಎಫ್‌ಎಕ್ಯೂ
ರೋಮ್, ಶನಿವಾರ, 25 ಸೆಪ್ಟೆಂಬರ್ 2010( 12:45 IST )
ವಿಶ್ವದಲ್ಲಿ ಆಹಾರ ದರ ಏರಿಕೆ ತೊಳಲಾಟ ಆಹಾರ ಸುರಕ್ಷತೆ ಯೋಜನೆಗೆ ಮಾರಕವಾಗಿದೆ. ಆದರೆ ರೋಮ್‌ನಲ್ಲಿ ನಡೆದ ವಿಶೇಷ ಸಭೆಯ ನಂತರ ಹೆಚ್ಚಿನ ಬಿಕ್ಕಟ್ಟು ಎದುರಾಗಿಲ್ಲ ಎಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಹೇಳಿಕೆ ನೀಡಿದೆ.
ಬರಗಾಲದಿಂದಾಗಿ ಆಹಾರ ಧಾನ್ಯಗಳನ್ನು ರಫ್ತನ್ನು ತಡೆಹಿಡಿಯಲಾಗಿದೆ ಎನ್ನುವ ರಷ್ಯಾದ ನಿರ್ಧಾರದ ಹಿನ್ನೆಲೆಯಲ್ಲಿ ರೋಮ್‌ನಲ್ಲಿ ಸುಮಾರು 75 ಸರಕಾರಗಳ ಪ್ರತಿನಿಧಿಗಳು ಸಭೆ ಸೇರಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಕಳೆದ ಜುಲೈ ತಿಂಗಳಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ದರದಲ್ಲಿ ಶೇ.60ರಿಂದ ಶೇ.80ರಷ್ಟು ಇಳಿಕೆಯಾಗಿದೆ. ಮೈದಾ ದರದಲ್ಲಿಶೇ.40ರಷ್ಟು ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗುವ ಸೂಚನೆಗಳು ಕಂಡುಬಂದಿಲ್ಲವೆಂದು ಎಫ್‌ಎಕ್ಯೂ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.