ಶೀಘ್ರದಲ್ಲಿ ಭಾರತ-ಬ್ಲ್ಯಾಕ್ ಬೆರ್ರಿ ಒಪ್ಪಂದಕ್ಕೆ ಸೂಕ್ತ ಕ್ರಮ:ಕೆನಡಾ
ಟೊರೊಂಟೊ, ಶನಿವಾರ, 25 ಸೆಪ್ಟೆಂಬರ್ 2010( 16:42 IST )
ಭಾರತ ಬ್ಲ್ಯಾಕ್‌ಬೆರ್ರಿ ಸೇವೆಗಳನ್ನು ನಿಷೇಧಿಸಲಿದೆ ಎನ್ನುವ ಬೆದರಿಕೆಯ ಹಿನ್ನೆಲೆಯಲ್ಲಿ ಕೆನಡಾದ ವಾಣಿಜ್ಯ ಸಚಿವ ಪೀಟರ್ ವಾನ್ ಲೊನ್, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಶೀಘ್ರದಲ್ಲಿ ಒಪ್ಪಂದವಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಉಭಯ ರಾಷ್ಟ್ರಗಳ ಮಧ್ಯದ ವಹಿವಾಟು ವೃದ್ಧಿಗಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಎರಡು ದೇಶಗಳ ಸಚಿವರು ಮುಂಬರುವ ಐದು ವರ್ಷಗಳಲ್ಲಿ 15 ಬಿಲಿಯನ್ ಡಾಲರ್‌ಗಳಿಗೆ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ 10 ಲಕ್ಷ ಮೊಬೈಲ್ ಗ್ರಾಹಕರನ್ನು ಹೊಂದಿರುವ ಬ್ಲ್ಯಾಕ್ ಬೆರ್ರಿ, ಟ್ರಾಯ್ ನಿಯಮಗಳನ್ನು ಪಾಲಿಸದಿದ್ದಲ್ಲಿ ನಿಷೇಧ ಹೇರಲಾಗುವುದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.