ವಾಷಿಂಗ್ಟನ್, ಶನಿವಾರ, 25 ಸೆಪ್ಟೆಂಬರ್ 2010( 17:05 IST )
ವಿದೇಶಿ ವಿನಿಮಯ ಸೇವೆಗಳಿಗಾಗಿ ಆರ್ಥಿಕ ಸಂಕಷ್ಟವ್ನನು ಎದುರಿಸುತ್ತಿರುವ ದ್ವೀಪರಾಷ್ಟ್ರವಾದ ಶ್ರೀಲಂಕಾಗೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) 213 ಮಿಲಿಯನ್ ಡಾಲರ್‌ಗಳ ಸಾಲವನ್ನು ನೀಡಲು ನಿರ್ಧರಿಸಿದೆ ಎಂದು ಐಎಂಎಫ್ ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ವಹಿವಾಟಿನ ಆರ್ಥಿಕ ತೊಂದರೆಗಳನ್ನು ತೃಪ್ತಿಕರವಾಗಿ ನಿರ್ವಹಿಸಲು, ಐದನೇ ಸವಾದ ಕಂತು 1.3 ಬಿಲಿಯನ್ ಡಾಲರ್‌ಗಳನ್ನು ನೀಡಲು ನಿರ್ಧರಿಸಿದೆ ಎಂದು ಐಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಲಂಕಾದ ಒಟ್ಟಾರೆ ಆರ್ಥಿಕತೆಯಲ್ಲಿ ಚೇತರಿಕೆಯಾಗುತ್ತಿದ್ದು, ಪ್ರಸಕ್ತ ವರ್ಷಾಂತ್ಯಕ್ಕೆ ಆರ್ಥಿಕತೆಯಲ್ಲಿ ಮತ್ತಷ್ಟು ಚೇತರಿಕೆಯಾಗುವ ನಿರೀಕ್ಷೆಗಳಿವೆ. ದೇಶದಲ್ಲಿ ರಾಜಕೀಯ ಸ್ಥಿರತೆ ಮುಂದುವರಿದಿದೆ ಎಂದು ಐಎಂಎಫ್ ಶ್ಲಾಘಿಸಿದೆ.
ಕಳೆದ ವರ್ಷದ ಅವಧಿಯಲ್ಲಿ ವಿದೇಶಿ ವಿನಿಮಯ ಸಂಗ್ರಹ ಬಿಲಿಯನ್ ಡಾಲರ್‌ಗಳಷ್ಟು ಕುಸಿತವಾದ ಹಿನ್ನೆಲೆಯಲ್ಲಿ ಐಎಂಎಫ್ 2.6ಬಿಲಿಯನ್ ಡಾಲರ್‌ಗಳ ಬೇಲೌಟ್ ಪ್ಯಾಕೇಜ್ ಘೋಷಿಸಿತ್ತು.
ಶ್ರೀಲಂಕಾದ ಸೇನಾಪಡೆಗಳು ಎಲ್‌ಟಿಟಿಇ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಎರಡು ತಿಂಗಳುಗಳ ನಂತರ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸಾಲವನ್ನು ಮಂಜೂರು ಮಾಡಿತ್ತು.