ಚಿನಿವಾರಪೇಟೆ: ಬೆಳ್ಳಿಯ ದರದಲ್ಲಿ ಏರಿಕೆ, ಚಿನ್ನದ ದರ ಕುಸಿತ
ನವದೆಹಲಿ, ಶನಿವಾರ, 25 ಸೆಪ್ಟೆಂಬರ್ 2010( 17:51 IST )
ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ ಸಂಗ್ರಹಕಾರರಿಂದ, ಬೆಳ್ಳಿಯ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ಬೆಳ್ಳಿಯ ದರ ಪ್ರತಿ ಕೆಜಿಗೆ 33,175 ರೂಪಾಯಿಗಳಿಗೆ ತಲುಪಿದೆ.
30 ವರ್ಷಗಳ ಗರಿಷ್ಠ ದಾಖಲೆಯನ್ನು ಸ್ಥಾಪಿಸಿದ ಬೆಳ್ಳಿಯ ವಹಿವಾಟು, ಇಂದಿನ ಆರಂಭಿಕ ವಹಿವಾಟಿನಲ್ಲಿ ಪ್ರತಿ ಕೆಜಿಗೆ 175 ರೂಪಾಯಿಗಳಿಗೆ ಏರಿಕೆಯಾಗಿ, ಪ್ರತಿ ಕೆಜಿಗೆ 33,175 ರೂಪಾಯಿಗಳಿಗೆ ತಲುಪಿದೆ. ಆದರೆ, ಚಿನ್ನದ ದರದಲ್ಲಿ ಪ್ರತಿ 10ಗ್ರಾಂಗೆ 65 ರೂಪಾಯಿಗಳ ಇಳಿಕೆಯಾಗಿ 19,400 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬೆಳ್ಳಿಯ ದರ ಮೂರು ದಶಕಗಳ ಏರಿಕೆ ಕಂಡು ಪ್ರತಿ ಔನ್ಸ್‌ಗೆ 21.48 ಡಾಲರ್‌ಗಳಿಗೆ ತಲುಪಿದೆ. ಚಿನ್ನದ ದರ ಪ್ರತಿ ಔನ್ಸ್‌ಗೆ 1,300ಡಾಲರ್‌ಗಳಿಗೆ ತಲುಪಿದೆ.
ಬೆಳ್ಳಿಯ (100 ನಾಣ್ಯಗಳು)ದರದಲ್ಲಿ ಯಾವುದೇ ಬದಲಾವಣೆಯಾಗದೆ ಪ್ರತಿ ಕೆಜಿಗೆ 35,300 ರೂಪಾಯಿಗಳಿಗೆ ತಲುಪಿದೆ.