ಕಿಂಗ್‌ಫಿಶರ್‌ನಿಂದ 245 ಕೋಟಿ ರೂಪಾಯಿ ಹಿಂಬಾಕಿ:ಬಿಪಿಸಿಎಲ್
ಮುಂಬೈ, ಸೋಮವಾರ, 27 ಸೆಪ್ಟೆಂಬರ್ 2010( 11:24 IST )
ಭಾರತ ಪೆಟ್ರೋಲಿಯಂ ಕಾರ್ಪೋರೇಶನ್‌ಗೆ ಖಾಸಗಿ ವಿಮಾನಯಾನ ಸಂಸ್ಥೆ ಕಿಂಗ್‌ಫಿಶರ್ ಏರ್‌ಲೈನ್ಸ್, 245 ಕೋಟಿ ರೂಪಾಯಿಗಳ ಬಾಕಿಯನ್ನು ಪಾವತಿಸಬೇಕಾಗಿದೆ ಎಂದು ಬಿಪಿಸಿಎಲ್ ಮುಖ್ಯಸ್ಥ ಎಸ್.ರಾಧಾಕೃಷ್ಣನ್ ಹೇಳಿದ್ದಾರೆ.
ನ್ಯಾಯಾಲಯದ ಇತ್ತೀಚಿನ ಆದೇಶದ ಪ್ರಕಾರ, ನವೆಂಬರ್ ತಿಂಗಳೊಳಗಾಗಿ ಸಂಪೂರ್ಣ ಬಾಕಿಯನ್ನು ಪಾವತಿಸುವಂತೆ ಆದೇಶಿಸಿದೆ. ಆದರೆ, ವಿಜಯ್ ಮಲ್ಯ ಸಂಚಾಲಿತ ಕಿಂಗ್‌ಫಿಶರ್ ಸಂಸ್ಥೆ ಕಂತುಗಳ ರೂಪದಲ್ಲಿ ಪಾವತಿಸುತ್ತಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಬಿಪಿಸಿಎಲ್ ಸಂಸ್ಥೆ ಇದೀಗ ಕಿಂಗ್‌ಫಿಶರ್ ಸಂಸ್ಥೆಗೆ ನಗದು ಹಣ ನೀಡಿದಲ್ಲಿ ಮಾತ್ರ ಇಂಧನ ನೀಡುವುದಾಗಿ ಹೇಳಿಕೆ ನೀಡಿದ್ದರಿಂದ. ಬಿಪಿಸಿಎಲ್‌ನಿಂದ ಇಂಧನ ಖರೀದಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸರಕಾರಿ ಸ್ವಾಮ್ಯದ ಏರ್‌ಇಂಡಿಯಾ ಸಂಸ್ಥೆ ಕೂಡಾ 300 ಕೋಟಿ ರೂಪಾಯಿಗಳ ಬಾಕಿಯನ್ನು ಉಳಿಸಿಕೊಂಡಿದೆ, ಜೆಟ್ ಏರ್‌ವೇಸ್ ಸಂಸ್ಥೆ 50 ಕೋಟಿ ರೂಪಾಯಿಗಳ ಹಿಂಬಾಕಿಯನ್ನು ಪಾವತಿಸಬೇಕಾಗಿದೆ ಎಂದು ವಿವರಣೆ ನೀಡಿದ್ದಾರೆ.
ಬಿಪಿಸಿಎಲ್ ಸಂಸ್ಥೆ ದೇಶದ 30 ವಿಮಾನನಿಲ್ದಾಣಗಳಲ್ಲಿ ಮಳಿಗೆಗಳನ್ನು ಹೊಂದಿದ್ದು, ಮತ್ತೆ ಏಳು ವಿಮಾನನಿಲ್ದಾಣಗಳಲ್ಲಿ ಮಳಿಗೆಗಳನ್ನು ಆರಂಭಿಸಲ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.