ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರವೇ ಭಾರತದಲ್ಲಿ ವಿಕಿಪಿಡಿಯಾ ಕಚೇರಿ ಆರಂಭ (Wikipedia | Google | Encyclopedia)
Bookmark and Share Feedback Print
 
ವಿಶ್ವದಾದ್ಯಂತ ಉಚಿತ ಆನ್‌‌ಲೈನ್ ಸೌಲಭ್ಯ ಒದಗಿಸುತ್ತಿರುವ ವಿಕಿಪಿಡಿಯಾಗೆ ಮಾಸಿಕವಾಗಿ 375 ಮಿಲಿಯನ್ ಬಳಕೆದಾರರು ಭೇಟಿ ನೀಡುತ್ತಿದ್ದು, ಗೂಗಲ್ ನಂತರದ ಸ್ಥಾನವನ್ನು ಪಡೆದಿದೆ. ಇದೀಗ ಭಾರತದಲ್ಲಿ ಕಚೇರಿಯನ್ನು ಆರಂಭಿಸಲು ನಿರ್ಧರಿಸಿದ್ದು, ಬಹುತೇಕ ಮುಂಬೈ ನಗರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿಕಿ ಫೌಂಡೇಶನ್ ವತಿಯಿಂದ ಭಾರತದ ಪಠ್ಯವನ್ನು ಶೀಘ್ರದಲ್ಲಿ ಬೆಂಗಳೂರು ನಗರದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಮುಂಬರುವ 2011ರ ಆರಂಭದ ವೇಳೆಗೆ ವಿಕಿಪಿಡಿಯಾ ಕಚೇರಿಯನ್ನು ಆರಂಭಿಸಲಿದೆ ಎಂದು ವಿಕಿಮೀಡಿಯಾ ಫೌಂಡೇಶನ್‌ ಮುಖ್ಯ ಗ್ಲೋಬಲ್ ಡೆವಲೆಪ್‌ಮೆಂಟ್ ಅದಿಕಾರಿ ಬ್ಯಾರ್ರಿ ನ್ಯೂಸ್ಟೆಡ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ಕಚೇರಿಯನ್ನು ಆರಂಭಿಸುವುದರೊಂದಿಗೆ ಸರ್ವರ್‌ ಕೂಡಾ ಅಳವಡಿಸಲಾಗುವುದು. ಮೆರಿಕ ಮೂಲದ ಸರ್ವರ್‌ಗಳಿಂದ ಭಾರತದಲ್ಲಿ ಬಳಕೆದಾರರು ವೆಬ್‌ಸೈಟ್ ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಚಾರಿಟೇಬಲ್ ಸೂ,ಸೈಟಿ ಆಕ್ಟ್ ಪ್ರಕಾರ ಇಂಡಿಯಾ ಚಾಪ್ಟರ್ ನೋಂದಾಯಿಸಲಾಗಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನ್ಯೂಸ್ಟೆಡ್ ಹೇಳಿದ್ದಾರೆ.

ಭಾರತದಲ್ಲಿ ಆರಂಭಿಸಲಾಗಿರುವ ಕಚೇರಿಯನ್ನು ಮುಂಬೈ, ನವದೆಹಲಿ ಅಥವಾ ಬೆಂಗಳೂರು ನಗರಗಳಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ ಇನ್ನು ಅಂತಿಮಗೊಳಿಸಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ