ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೊನಾಟಾ ಸೆಡಾನ್ ಕಾರುಗಳ ವಾಪಸಾತಿಗೆ ಹುಂಡೈ ನಿರ್ಧಾರ (Hyundai Motor | South Korea | Steering wheel | Recall)
Bookmark and Share Feedback Print
 
ದಕ್ಷಿಣ ಕೊರಿಯಾದ ವಾಹನೋದ್ಯಮ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹುಂಡೈ ಮೋಟಾರ್, ಸ್ಟೀಯರಿಂಗ್ ಚಕ್ರದಲ್ಲಿನ ದೋಷದಿಂದಾಗಿ ಅಮೆರಿಕದಲ್ಲಿ ಮಾರಾಟ ಮಾಡಲಾದ 139,500 ಸೋನಾಟಾ ಸೆಡಾನ್ ಕಾರುಗಳನ್ನು ವಾಪಸ್‌ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ಅಗಸ್ಟ್ ತಿಂಗಳಲ್ಲಿ ಅಮೆರಿಕದ ನ್ಯಾಷನಲ್‌ ಹೈವೇ ಟ್ರಾಫಿಕ್ ಸೂಸೈಟಿ ಅಡ್ಮಿನಿಸ್ಟ್ರೇಶನ್,ಸೋನಾಟಾ ಸೆಡಾನ್ ಕಾರುಗಳ ಸ್ಟೀಯರಿಂಗ್ ಚಕ್ರದ ಧೋಷಗಳ ಕುರಿತಂತೆ ತನಿಖೆಯನ್ನು ಆರಂಭಿಸಿದ ಹಿನ್ನೆಲೆಯಲ್ಲಿ, ಕಾರುಗಳನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಂಡೈ ಕಂಪೆನಿ, ಸುರಕ್ಷತಾ ಸಮಸ್ಯೆಗಳ ಯಾವುದೇ ರೀತಿಯ ಟೀಕೆಗಳಿಂದ ಮುಕ್ತವಾಗಲು ಕಾರುಗಳನ್ನು ವಾಪಸ್‌ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ಡೈಶಿನ್ ಸೆಕ್ಯೂರಿಟೀಸ್ ಮುಖ್ಯಸ್ಥ ಕಿಮ್ ಬುಯಾಂಗ್-ಕುಕ್ ಅಭಿಪ್ರಾಯಪಟ್ಟಿದ್ದಾರೆ.

ಸ್ಟೀಯರಿಂಗ್ ದೋಷದಿಂದಾಗಿ ಇಲ್ಲಿಯವರೆಗೆ ಯಾವುದೇ ಅಪಘಾತಗಳಾಗಲಿ ಅಥವಾ ಗಾಯಗಳಾಗಲಿ ಸಂಭವಿಸಿಲ್ಲ ಎಂದು ಹುಂಡೈ ಕಂಪೆನಿ ಇ-ಮೇಲ್ ಸಂದೇಶದಲ್ಲಿಪ್ರಕಟಿಸಿದೆ.

ಹುಂಡೈ ಕಂಪೆನಿ ಅಮೆರಿಕದಲ್ಲಿ ಜನೆವರಿಯಿಂದ ಅಗಸ್ಟ್ ತಿಂಗಳ ಅವಧಿಯಲ್ಲಿ 128,484 ವಾಹನಗಳನ್ನು ಮಾರಾಟ ಮಾಡಿದೆ
ಸಂಬಂಧಿತ ಮಾಹಿತಿ ಹುಡುಕಿ