ದೇಶದ ದೇಶದ ವಿದ್ಯುತ್ ಉಪಕರಣಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರು ಲಾರ್ಸನ್ ಆಂಡ್ ಟೌಬ್ರೋ, ವೀಸಾ ಪವರ್‌ನಿಂದ ಎರಡು ವಿದ್ಯುತ್ ಘಟಕಗಳ (ತಲಾ 600 ಮೆವ್ಯಾ) ನಿರ್ಮಾಣಕ್ಕಾಗಿ 1,610 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆಯಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಚತ್ತೀಸ್‌ಗಢ್ ರಾಜ್ಯದ ರಾಯ್‌ಗಢ್ ಜಿಲ್ಲೆಯಲ್ಲಿ ಎರಡು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದ್ದು 29-32 ತಿಂಗಳೊಳಗಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಲಾರ್ಸನ್ ಆಂಡ್ ಟೌಬ್ರೋ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಗುತ್ತಿಗೆಯನ್ವಯ ಇಂಜಿನಿಯರಿಂಗ್, ವಿದ್ಯುತ್ ಉಪಕರಣಗಳ ಸರಬರಾಜು, ಕಟ್ಟಡ ನಿರ್ಮಾಣ, ವಿನ್ಯಾಸ ಸೇರಿದಂತೆ ಇತರ ಹೊಣೆಗಳನ್ನು ವಹಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾರ್ಸನ್ ಆಂಡ್ ಟೌಬ್ರೋ ಕಂಪೆನಿ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಘಟಕಗಳ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದ್ದು, ಕಳೆದ ತಿಂಗಳು ಜೈಪ್ರಕಾಶ್ ಗ್ರೂಪ್ ಪವರ್‌ನಿಂದ 6,500 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.