ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದಾಖಲೆಯ ಏರಿಕೆ : ಬೆಳ್ಳಿಯ ದರ ಪ್ರತಿ ಕೆಜಿಗೆ 33,300 ರೂ. (Silver | Global cues | Gold | International prices | Marriage season)
Bookmark and Share Feedback Print
 
ಬೆಳ್ಳಿಯ ದರ ನಿರಂತರವಾಗಿ ದಾಖಲೆಯ ಏರಿಕೆ ಕಾಣುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿಪ್ರತಿ ಕೆಜಿ ಬೆಳ್ಳಿ ದರದಲ್ಲಿ 125 ರೂಪಾಯಿಗಳ ಏರಿಕೆಯಾಗಿ 33,300 ರೂಪಾಯಿಗಳಿಗೆ ತಲುಪಿದೆ.

ಚಿನ್ನದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ. ಚಿನ್ನದ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬೆಳ್ಳಿಯ ದರ ಪ್ರತಿ ಔನ್ಸ್‌ಗೆ ಶೇ.0.8ರಷ್ಟು ಏರಿಕೆ ಕಂಡು 21.60 ಡಾಲರ್‌ಗಳಿಗೆ ತಲುಪಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಬೆಳ್ಳಿ ದರದ ಚೇತರಿಕೆಯ ಪರಿಣಾಮದಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಕೂಡಾ ದರದಲ್ಲಿ ಏರಿಕೆಯಾಗಿದೆ.

ಮುಂಬರುವ ದಿನಗಳಲ್ಲಿ ಹಬ್ಬಗಳು ಹಾಗೂ ಮದುವೆ ಸೀಜನ್ ಹಿನ್ನೆಲೆಯಲ್ಲಿ, ಚಿನ್ನ ಮತ್ತು ಬೆಳ್ಳಿಯ ದರಗಳು ನಿರಂತರವಾಗಿ ಏರಿಕೆ ಕಾಣುತ್ತಿವೆ ಎಂದು ಮುಂಬೈ ಚಿನಿವಾರಪೇಟೆಯ ವರ್ತಕರು ತಿಳಿಸಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 125 ರೂಪಾಯಿಗಳ ಏರಿಕೆಯಾಗಿ ಮೊದಲ ಬಾರಿಗೆ 33,300 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ