ಒಹಿಯೊ ನಿಷೇಧದಿಂದ ಭಾರತೀಯ ಕಂಪೆನಿಗಳಿಗೆ ಧಕ್ಕೆಯಿಲ್ಲ:ಯುಎಸ್
ನವದೆಹಲಿ, ಮಂಗಳವಾರ, 28 ಸೆಪ್ಟೆಂಬರ್ 2010( 12:22 IST )
ಅಮೆರಿಕದ ಒಹಿಯೊ ರಾಜ್ಯದ ಹೊರಗುತ್ತಿಗೆ ನಿಷೇಧ ಭಾರತದ ಐಟಿ ಕಂಪೆನಿಗಳಿಗೆ ಬರಸಿಡಿಲಿನಂತೆ ಬಂದೆರಗಿತ್ತು. ಆದರೆ, ಇದೀಗ ನೆಮ್ಮದಿಯ ಉಸಿರು ಬಿಡುವಂತಾಗಿದೆ.ಒಹಿಯೊ ರಾಜ್ಯದ ಹೊರಗುತ್ತಿಗೆ ನಿಷೇಧದಿಂದ ಭಾರತದ ಐಟಿ ವಹಿವಾಟಿನ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ಅಮೆರಿಕದ ರಾಯಭಾರಿ ಟಿಮ್ ರೊಮೆಯೊರ್ ಹೇಳಿದ್ದಾರೆ.
ಹೊರಗುತ್ತಿಗೆ ನಿಷೇಧದಿಂದಾಗಿ ವಿಶ್ವದಾದ್ಯಂತ ಹರಡುತ್ತಿರುವ ಉಹಾಪೋಹ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ರೊಮೆಯೊರ್, ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ಬಾಂಧ್ಯವ ಸಕಾರಾತ್ಮಕ ರೀತಿಯಲ್ಲಿ ಸಾಗುತ್ತಿವೆ. ನಿಷೇಧದಿಂದ ಭಾರತದ ವಹಿವಾಟಿಗೆ ಧಕ್ಕೆಯಿಲ್ಲ ಎಂದು ತಿಳಿಸಿದ್ದಾರೆ.
ಹೊರಗುತ್ತಿಗೆ ನೀಡುವ ಅಮೆರಿಕದ ಕಂಪೆನಿಗಳ ತೆರಿಗೆ ರಿಯಾಯಿತಿಗಳನ್ನು ರದ್ದುಗೊಳಿಸಲಾಗುವುದು ಎಂದು ಅದ್ಯಕ್ಷ ಬರಾಕ್ ಒಬಾಮಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಿಂದ ಭಾರಿ ಟೀಕೆಗೆ ಒಳಗಾಗಿತ್ತು.
ಅಮೆರಿಕ-ಚೀನಾ-ಭಾರತ ಮೂರು ದೇಶಗಳು ಏಷ್ಯಾದ ಉಪಖಂಡದಲ್ಲಿ ವಹಿವಾಟು ಸ್ಥಿರತೆಯನ್ನು ಬಯಸುತ್ತಿವೆ. ಪರಮಾಣು ಒಪ್ಪಂದ ಭಾರತೊಂದಿಗೆ ಸಾಧ್ಯವಾದಂತೆ, ಪಾಕಿಸ್ತಾನದೊಂದಿಗೆ ಪರಮಾಣು ಒಪ್ಪಂದ ಸಾಧ್ಯವಾಗುವುದಿಲ್ಲ ಎಂದು ಅಮೆರಿಕದ ರಾಯಭಾರಿ ಟಿಮ್ ರೊಮೆಯೊರ್ ಹೇಳಿದ್ದಾರೆ.