ಬ್ಯಾಂಕಿಂಗ್ ಕ್ಷೇತ್ರ ಪ್ರವೇಶಕ್ಕೆ ಅನಿಲ್ ಅಂಬಾನಿ ಸಿದ್ಧತೆ
ಮುಂಬೈ, ಮಂಗಳವಾರ, 28 ಸೆಪ್ಟೆಂಬರ್ 2010( 14:42 IST )
ಬ್ಯಾಂಕ್‌ಗಳನ್ನು ಆರಂಭಿಸುವ ಸಂಸ್ಥೆಗಳಿಗೆ ಅನುಮತಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಲಿದೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ, ಅನಿಲ್ ಅಂಬಾನಿ ನೇತೃತ್ವದ ಗ್ರೂಪ್ ರಿಲಯನ್ಸ್ ಕ್ಯಾಪಿಟಲ್ ಮೂಲಕ ಬ್ಯಾಂಕಿಂಗ್ ತ್ರೇತ್ರವನ್ನು ಪ್ರವೇಶಿಸಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕಿಂಗ್ ಕ್ಷೇತ್ರ ಮಹತ್ವದ್ದಾಗಿದ್ದು, ವಿಫುಲ ಅವಕಾಶಗಳಿರುವುದರಿಂದ, ರಿಲಯನ್ಸ್ ಕ್ಯಾಪಿಟಲ್ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರವೇಶಿಸಲು ನಿರ್ಧರಿಸಿದೆ ಎಂದು ರಿಲಯನ್ಸ್ ಕ್ಯಾಪಿಟಲ್ ಮುಖ್ಯಸ್ಥ ಅನಿಲ್ ಅಂಬಾನಿ ಕಂಪೆನಿಯ ವಾರ್ಷಿಕ ಸಭೆಯಲ್ಲಿ ತಿಳಿಸಿದ್ದಾರೆ.
ವಿಶ್ವಮಟ್ಟದ ಬ್ಯಾಂಕ್ ಆರಂಭಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ರಿಲಯನ್ಸ್ ಕ್ಯಾಪಿಟಲ್ ಮುಖ್ಯಸ್ಥ ಅನಿಲ್ ಅಂಬಾನಿ ಹೇಳಿದ್ದಾರೆ.
ದೇಶದ ಹಣಕಾಸು ಕಂಪೆನಿಗಳು ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರವೇಶಿಸಲು ಆರ್‌ಬಿಐ ಅನುಮತಿ ನೀಡಲಾಗುವುದು ಎಂದು ಹೇಳಿಕೆ ನೀಡಿದ ನಂತರ, ರಿಲಯನ್ಸ್ ಕ್ಯಾಪಿಟಲ್ ಮೂಲಕ ವಿಶ್ವಮಟ್ಟದ ಬ್ಯಾಂಕ್‌ಗಳನ್ನು ಆರಂಭಿಸುವುದು ನಮ್ಮ ಮಹತ್ವದ ಕನಸಾಗಿದೆ ಎಂದು ಅಂಬಾನಿ ತಿಳಿಸಿದ್ದಾರೆ.