ಪ್ರಸಕ್ತ ಆರ್ಥಿಕ ವರ್ಷಾಂತ್ಯದೊಳಗೆ ವಿದೇಶಿ ಬಂಡವಾಳ ಹೂಡಿಕೆದಾರರು ರಸ್ತೆ ಯೋಜನೆಗಳಲ್ಲಿ ಶೇ.30ರಷ್ಟು(18 ಬಿಲಿಯನ್ ಡಾಲರ್)ಹೂಡಿಕೆ ಮಾಡುವ ನಿರೀಕ್ಷೆಗಳಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಧೀಕಾರದ ಹಣಕಾಸು ಮುಖ್ಯಸ್ಥರಾದ ಜೆ.ಎನ್.ಸಿಂಗ್ ಮಾತನಾಡಿ, ಏಷ್ಯಾ ಮತ್ತು ಯುರೋಪಿಯನ್ ಕಂಪೆನಿಗಳು ರಸ್ತೆ ಯೋಜನೆಗಳಲ್ಲಿ ಹೂಡಿಕೆಗೆ ಆಸಕ್ತಿ ವಹಿಸಿವೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ ಏಪ್ರಿಲ್‌ನಿಂದ ಅಗಸ್ಟ್‌ವರೆಗಿನ ಅವಧಿಯಲ್ಲಿ 3 ಸಾವಿರ ಕೀ.ಮಿ. ರಸ್ತೆ ನಿರ್ಮಾಣ ಗುತ್ತಿಗೆಯನ್ನು ಪಡೆದಿದ್ದು,ವರ್ಷಾಂತ್ಯದೊಳಗೆ 6 ಸಾವಿರ ಕೀ.ಮಿ. ಹೆದ್ದಾರಿ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಸ್ಪೇನ್, ಇಂಗ್ಲೆಂಡ್, ಇಟಲಿ, ಸೌದಿ ಅರೇಬಿಯಾ, ಚೀನಾ, ರಷ್ಯಾ ಮತ್ತು ಮಲೇಷಿಯಾದ ಕಂಪೆನಿಗಳು, ದೇಶದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿವೆ ಎಂದು ಹೇಳಿದ್ದಾರೆ.
ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ಭಾರತಕ್ಕೆ 80 ಬಿಲಿಯನ್ ಡಾಲರ್‌ಗಳ ಹೂಡಿಕೆಗಳ ಅಗತ್ಯವಿದೆ. ಕನಿಷ್ಠ 40 ಬಿಲಿಯನ್ ಡಾಲರ್‌ಗಳಷ್ಟು ಮೊತ್ತವನ್ನು ಖಾಸಗಿ ಸಂಸ್ಥೆಗಳು ವಹಿಸಿಕೊಳ್ಳುವ ನಿರೀಕ್ಷೆಗಳಿವೆ ಎಂದು ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.