ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕ ಸಂಸತ್ತಿನಲ್ಲಿ ಹೊರಗುತ್ತಿಗೆ ನಿಷೇಧ ಮಸೂದೆಗೆ ತಡೆ (US Senate | Anti-outsourcing | Bill | Republicans | Block)
Bookmark and Share Feedback Print
 
ಹೊರಗುತ್ತಿಗೆ ನೀಡುವ ಕಂಪೆನಿಗಳ ತೆರಿಗೆ ವಿನಾಯಿತಿ ರದ್ದುಗೊಳಿಸುವ ಹೊರಗುತ್ತಿಗೆ ನಿಷೇಧ ಮಸೂದೆಗೆ, ಅಮೆರಿಕ ಸಂಸತ್ತಿನ ಲ್ಲಿ ರಿಪಬ್ಲಿಕನ್ ಸದಸ್ಯರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.

ಹೊರಗುತ್ತಿಗೆ ನಿಷೇಧ ಮಸೂದೆ ಜಾರಿಯಾಗಲು ಕನಿಷ್ಠ 60 ಮತಗಳ ಅಗತ್ಯವಿತ್ತು.ಆದರೆ, ಸಂಸತ್ತಿನಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರು ಮಸೂದೆಯನ್ನು ವಿರೋಧಿಸಿದ್ದರಿಂದ 53-45 ಮತಗಳ ಅಂತರದಿಂದ ಸರಕಾರ ಸೋಲನುಭವಿಸಬೇಕಾಯಿತು.

ಮಸೂದೆಯ ಪ್ರಕಾರ, ಅಮೆರಿಕದ ತೆರಿಗೆ ಪಾವತಿದಾರರ ಹಣವನ್ನು ಹೊರಗುತ್ತಿಗೆಯಿಂದಾಗಿ ವಿದೇಶಗಳಿಗೆ ರವಾನೆಯಾಗುತ್ತಿದ್ದು. ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳಲ್ಲಿ ಹೆಚ್ಚಳವಾಗುವುದು ತಡೆಯುವುದು ಮಹತ್ವದ ಉದ್ದೇಶವಾಗಿತ್ತು.

ಅಮೆರಿಕದ ಹೊರಗುತ್ತಿಗೆ ನಿಷೇಧ ಕುರಿತಂತೆ ಪ್ರತಿಕ್ರಿಯಿಸಿದ ಭಾರತ ಸಾಫ್ಟ್‌ವೇರ್ ಕಂಪೆನಿಗಳ ಮುಖ್ಯಸ್ಥರು, ಹೊರಗುತ್ತಿಗೆ ನಿಷೇಧದಿಂದ ಭಾರತದ ಮೇಲೆ ಅಲ್ಪ ಪರಿಣಾಮ ಬೀರಲಿದೆ.ಇತರ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಕಂಪೆನಿಗಳಿಗೆ ಕೂಡಾ ಇದೇ ರೀತಿಯ ನಿಷೇಧಗಳು ಎದುರಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ