ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಮರ್ಸಿಡೆಸ್‌-ಬೆಂಝ್‌ ಬಸ್ ರಸ್ತೆಗಿಳಿಯಲಿವೆ (Wilfried aulbur | Mercedes-benz india | Chakan facility)
Bookmark and Share Feedback Print
 
ಜಾಗತಿಕ ಮಟ್ಟದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡೆಸ್-ಬೆಂಝ್, 2011ರ ಅವಧಿಯಲ್ಲಿ ಪುಣೆಯಲ್ಲಿರುವ ಚಾಕನ್‌ ಘಟಕದಿಂದ ಬಸ್‌ಗಳನ್ನು ತಯಾರಿಸಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಸಿಟಿ ಬಸ್‌‌ಗಳ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದು, 2011ರ ಅವಧಿಯಲ್ಲಿ ರಸ್ತೆಗಿಳಿಯಲಿವೆ ಎಂದು ಮರ್ಸಿಡೆಸ್-ಬೆಂಝ್‌ನ ಇಂಡಿಯಾದ ಮುಖ್ಯಸ್ಥ ವಿಲ್‌ಪ್ರೈಡ್ ಆಲ್ಬರ್ ಹೇಳಿದ್ದಾರೆ.

ಮಲ್ಟಿ ಎಕ್ಸಲ್ ಐಷಾರಾಮಿ ಪ್ರಯಾಣಿಕರ ಬಸ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಲ್ಬರ್, ಪುಣೆಯ ಚಾಕನ್ ಘಟಕದಲ್ಲಿ ವಾರ್ಷಿಕವಾಗಿ 500 ಬಸ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಮರ್ಸಿಡೆಸ್ ಬೆಂಝ್ ಕಂಪೆನಿ, ಬೆಂಗಳೂರಿನಲ್ಲಿ ಪ್ರಾಯೋಗಿಕ ಹಂತವಾಗಿ ಸಿಟಿ ಬಸ್‌ಗಳನ್ನು ಓಡಿಸುತ್ತಿದೆ. ಇಲ್ಲಿಯವರೆಗೆ ಕಂಪೆನಿ 64 ಬಸ್‌ಗಳನ್ನು ಮಾರಾಟ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಸಿಟಿಬಸ್ ಮತ್ತು ಪ್ರಯಾಣಿಕರ ಬಸ್‌ಗಳ ಮಾರಾಟದಲ್ಲಿ ವಾರ್ಷಿಕವಾಗಿ ಶೇ.20ರಷ್ಟು ಏರಿಕೆ ಕಾಣುತ್ತಿದೆ. ಐಷಾರಾಮಿ ಬಸ್‌ಗಳ ಮಾರಾಟದಲ್ಲಿ ಶೇ.22ರಷ್ಟು ಏರಿಕೆಯಾಗಿದೆ ಎಂದು ಮರ್ಸಿಡೆಸ್-ಬೆಂಝ್‌ನ ಇಂಡಿಯಾದ ಮುಖ್ಯಸ್ಥ ವಿಲ್‌ಪ್ರೈಡ್ ಆಲ್ಬರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ