ಒರಿಯಂಟಲ್ ಇನ್‌ಶ್ಯೂರೆನ್ಸ್‌ನಿಂದ ಆರೋಗ್ಯ ವಿಮೆ ಪಾಲಿಸಿ ಬಿಡುಗಡೆ
ನಾಗ್ಪುರ್, ಬುಧವಾರ, 29 ಸೆಪ್ಟೆಂಬರ್ 2010( 17:11 IST )
ಒರಿಯಂಟಲ್ ಇನ್‌ಶ್ಯೂರೆನ್ಸ್ ಕಂಪೆನಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎರಡು ಆರೋಗ್ಯ ವಿಮೆ ಪಾಲಿಸಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀಮಿಯರ್ ವಿಮೆ ಕಂಪೆನಿ ಕಳೆದ ವರ್ಷದ ಅವಧಿಯ ವಹಿವಾಟಿನ ನಿವ್ವಳ ಲಾಭದಲ್ಲಿ ಶೇ.19ರಷ್ಟು ಏರಿಕೆಯಾಗಿದ್ದು, 4,077.90 ಕೋಟಿ ರೂಪಾಯಿಗಳಿಂದ 4,854.68 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ ಕೌಲ್ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.16.38ರ (5,470ಕೋಟಿ ರೂಪಾಯಿ) ವೃದ್ಧಿಯ ಗುರಿಯನ್ನು ಹೊಂದಲಾಗಿದ್ದು, ಗ್ರಾಮೀಣ ವಿಮೆ ಮತ್ತು ಚಿಲ್ಲರೆ ಕ್ಷೇತ್ರದತ್ತ ಗಮನಹರಿಸಲಾಗಿದೆ ಎಂದು ಹೇಳಿದ್ದಾರೆ.
ಒರಿಯಂಟಲ್ ಇನ್‌ಶ್ಯೂರೆನ್ಸ್ ಕಂಪೆನಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 149 ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ ಕೌಲ್ ಹೇಳಿದ್ದಾರೆ.