ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನಿವಾರಪೇಟೆ: ದಾಖಲೆಯ ಏರಿಕೆ ಕಂಡ ಚಿನ್ನ, ಬೆಳ್ಳಿಯ ದರ (Silver | Gold | Bullion)
Bookmark and Share Feedback Print
 
ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆಯ ಹೆಚ್ಚಳದಿಂದಾಗಿ ಇಂದಿನ ವಹಿವಾಟಿನಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 800 ರೂಪಾಯಿಗಳ ಏರಿಕೆಯಾಗಿ 33,750 ರೂಪಾಯಿಗಳಿಗೆ ತಲುಪಿದೆ. ಚಿನ್ನದ ದರ ಪ್ರತಿ 10ಗ್ರಾಂಗೆ 140 ರೂಪಾಯಿಗಳ ಏರಿಕೆಯಾಗಿ 19,470 ರೂಪಾಯಿಗಳಿಗೆ ತಲುಪಿದೆ.

ಅಮೆರಿಕದ ರಿಸರ್ವ್ ಬ್ಯಾಂಕ್ ಆರ್ಥಿಕ ನೀತಿಗಳನ್ನು ಸರಳೀಕರಣಗೊಳಿಸಲಿದೆ ಎನ್ನುವ ವರದಿಗಳಿಂದಾಗಿ, ಡಾಲರ್ ಮೌಲ್ಯದಲ್ಲಿ ಗರಿಷ್ಠ 8 ತಿಂಗಳು ಕುಸಿದ ಹಿನ್ನೆಲೆಯಲ್ಲಿ, ಬೆಳ್ಳಿ ಮತ್ತು ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡಿದೆ.

ಏತನ್ಮಧ್ಯೆ, ಸಾಗರೋತ್ತರ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ 30 ವರ್ಷಗಳ ಗರಿಷ್ಠ ಏರಿಕೆ ಕಂಡು ಪ್ರತಿ ಔನ್ಸ್‌ಗೆ 22ಡಾಲರ್‌ಗಳಿಗೆ ತಲುಪಿದೆ. ಚಿನ್ನದ ದರ ಪ್ರತಿ ಔನ್ಸ್‌ಗೆ 1,313.45 ಡಾಲರ್‌ಗಳಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯ ವಹಿವಾಟಿನಲ್ಲಿ ಚೇತರಿಕೆಯಿದಾಗಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಏರಿಕೆಯಾಗಿದೆ. ಚಿಲ್ಲರೆ ಗ್ರಾಹಕರಿಂದ ಖರೀದಿಯಲ್ಲಿ ಏರಿಕೆಯಾಗಿಲ್ಲವೆಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಳ್ಳಿ, ಚಿನ್ನ, ಚಿನಿವಾರಪೇಟೆ