ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕುಸಿತಗೊಂಡ ಕಬ್ಬಿನ ಬೆಳೆ,ಪ್ರಸಕ್ತ ವರ್ಷದಲ್ಲಿ ಉತ್ತಮವಾಗಿದ್ದು, ದೀಪಾವಳಿಯ ನಂತರ ಸಕ್ಕರೆ ರಫ್ತು ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಆಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
2010-11ರ ಅವಧಿಯಲ್ಲಿ ಸಕ್ಕರೆ ಉತ್ಪಾದನೆ 25 ಮಿಲಿಯನ್ ಟನ್‌ಗಳಿಗೆ ತಲುಪಿದಲ್ಲಿ ಅಚ್ಚರಿ ಪಡಬೇಕಾಗಿಲ್ಲ ಎಂದು ಸಚಿವ ಪವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಕ್ಕರೆ ರಫ್ತಿಗೆ ಅನುಮತಿ ನೀಡಲಾಗುತ್ತಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪವಾರ್, ಪ್ರಸ್ತುತ ಸಕ್ಕರೆ ರಫ್ತು ವಹಿವಾಟಿನ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ದೀಪಾವಳಿಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರದ ಆಹಾರ ಸಚಿವಾಲಯ 2008-09ರ ಅವಧಿಯಲ್ಲಿ ಸಕ್ಕರೆ ಉತ್ಪಾದನೆ 14.7 ಮಿಲಿಯನ್ ಟನ್‌ಗಳಿಗೆ ಕುಸಿದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ2009ರಿಂದ ಸಕ್ಕರೆ ರಫ್ತು ವಹಿವಾಟಿಗೆ ನಿಷೇಧ ಹೇರಲಾಗಿತ್ತು.