ಹೈದ್ರಾಬಾದ್, ಗುರುವಾರ, 30 ಸೆಪ್ಟೆಂಬರ್ 2010( 11:40 IST )
ಕಳೆದ ಎರಡು ವರ್ಷಗಳಿಂದ ಸುಮಾರು 17,000 ಉದ್ಯೋಗಿಗಳು ರಾಜೀನಾಮೆ ನೀಡಿ ಕಂಪೆನಿಯನ್ನು ತೊರೆದಿದ್ದಾರೆ ಎಂದು ಸಾಫ್ಟ್‌ವೇರ್ ಕ್ಷೇತ್ರದ ಮಹೀಂದ್ರಾ ಸತ್ಯಂ ಮೂಲಗಳು ತಿಳಿಸಿವೆ.
2008-09 ಮತ್ತು 2009-10ರ ಅವಧಿಯಲ್ಲಿ ಕಂಪೆನಿಯ ಸಿಬ್ಬಂದಿಗಳ ಸಂಖ್ಯೆ 44,000ದಿಂದ 27,000ಕ್ಕೆ ಇಳಿಕೆಯಾಗಿದೆ ಎಂದು ಮಹೀಂದ್ರಾ ಸತ್ಯಂ ಮುಖ್ಯಸ್ಥ ವಿನೀತ್ ನಯ್ಯರ್ ತಿಳಿಸಿದ್ದಾರೆ.
ದೇಶದ ಸಾಫ್ಟ್‌ವೇರ್ ರಫ್ತು ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿರುವ ಮಹೀಂದ್ರಾ ಸತ್ಯಂ, ಮಾರ್ಚ್2010ಕ್ಕೆ ವರ್ಷಾಂತ್ಯಗೊಂಡಂತೆ 124.60 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ.
ಕಂಪೆನಿಯ ಒಟ್ಟು ರಫ್ತು ವಹಿವಾಟು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 5,481 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಮಹೀಂದ್ರಾ ಸತ್ಯಂ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಜನವರಿ ತಿಂಗಳ ಅವಧಿಯಲ್ಲಿ ಸತ್ಯಂ ಕಂಪ್ಯೂಟರ್ ಮಾಜಿ ಸಂಸ್ಥಾಪಕ ಬಿ.ರಾಮಾಲಿಂಗಾರಾಜು ಬಹುಕೋಟಿ ಹಗರಣದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿಕೆ ನೀಡಿದ ನಂತರ, ಮೊದಲ ಬಾರಿಗೆ ಪರಿಶೋಧಿತ ಆರ್ಥಿಕ ಫಲಿತಾಂಶ ಬಿಡುಗಡೆಗೊಂಡಿದೆ.
ಏಪ್ರಿಲ್ 2009ರಲ್ಲಿ ಟೆಕ್ ಮಹೀಂದ್ರಾ ಸಂಸ್ಥೆ, ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ ಸರ್ವಿಸಸ್ ಕಂಪೆನಿಯನ್ನು ಖರೀದಿಸಿತ್ತು.