ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.44ಕ್ಕೆ ಏರಿಕೆ ಕಂಡ ಆಹಾರ ಹಣದುಬ್ಬರ ದರ (Inflation | Food prices | Cereals | fruits,)
Bookmark and Share Feedback Print
 
PTI
ದೇಶದ ಹಲವು ಭಾಗಗಳಲ್ಲಿ ಪ್ರವಾಹ ಪ್ರಕೋಪದಿಂದ ಸರಬರಾಜಿನಲ್ಲಿ ಅಡ್ಡಿಯಾಗಿದ್ದರಿಂದ,ಧಾನ್ಯಗಳು, ಹಣ್ಣು, ತರಕಾರಿ ಮತ್ತು ಹಾಲು ದರಗಳಲ್ಲಿ ಏರಿಕೆಯಾಗಿದ್ದರಿಂದ ಆಹಾರ ಹಣದುಬ್ಬರ ದರ ಸೆಪ್ಟೆಂಬರ್ 18ಕ್ಕೆ ವಾರಂತ್ಯಗೊಂಡಂತೆ ಶೇ.16.44ಕ್ಕೆ ಏರಿಕೆಯಾಗಿದೆ.

ವಾರದ ಆಧಾರದನ್ವಯ ಆಹಾರ ಹಣದುಬ್ಬರ ದರ ಕಳೆದ ವಾರಕ್ಕೆ ಹೋಲಿಸಿದಲ್ಲಿ ಶೇ.0.98ರಷ್ಟು ಏರಿಕೆಯಾಗಿದೆ.

ಕಳೆದ ಜುಲೈ ಹಾಗೂ ಅಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಇಳಿಕೆ ಕಂಡಿದ್ದ ಆಹಾರ ಹಣದುಬ್ಬರ ದರ, ಆಹಾರ ದರಗಳ ಏರಿಕೆಯಿಂದಾಗಿ ಸತತ ಐದನೇ ವಾರದ ಅವಧಿಯಲ್ಲಿ ಏರಿಕೆಯತ್ತ ಸಾಗಿದೆ.

ವಾರ್ಷಿಕ ಆಧಾರದನ್ವಯ ದ್ವಿದಳ ಧಾನ್ಯ, ಭತ್ತ ಮತ್ತು ಗೋಧಿ ದರಗಳಲ್ಲಿ ಏರಿಕೆಯಾಗಿದ್ದರಿಂದ, ಧಾನ್ಯಗಳ ದರಗಳಲ್ಲಿ ಶೇ 6.11ರಷ್ಟು ಏರಿಕೆ ಕಂಡಿದೆ.

ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.5.94ರಷ್ಟು ಏರಿಕೆಯಾಗಿದೆ. ಗೋಧಿ ಮತ್ತು ಭತ್ತದ ದರಗಳಲ್ಲಿ ಕ್ರಮವಾಗಿ ಶೇ.9.14ರಿಂದ ಶೇ.4.05ರಷ್ಟು ಏರಿಕೆಯಾಗಿದೆ.

ಇತರ ಆಹಾರ ವಸ್ತುಗಳಾದ, ಹಾಲು ದರದಲ್ಲಿ ಶೇ.24.32ರಷ್ಟು ಏರಿಕೆಯಾಗಿದೆ. ಏತನ್ಮಧ್ಯೆ, ಹಣ್ಣುಗಳ ದರಗಳಲ್ಲಿ ಶೇ.15.13ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ