ದೇಶದ 100 ಶ್ರೀಮಂತ ಉದ್ಯಮಿಗಳ ಪಟ್ಟಿಯನ್ನು ಫೋರ್ಬ್ಸ್ ಮ್ಯಾಗ್‌ಜಿನ್ ಬಿಡುಗಡೆಗೊಳಿಸಿದ್ದು, ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ 27 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಸತತ ಮೂರನೇ ಬಾರಿಗೆ ಅಗ್ರಸ್ಥಾನದಲ್ಲಿದ್ದಾರೆ.
ಉಕ್ಕು ಸಾಮ್ರಾಜ್ಯದ ಅಧಿಪತಿ ಎಲ್.ಎನ್.ಮಿಕ್ಕಲ್ ಮತ್ತು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಕ್ರಮವಾಗಿ ನಂತರದ ಸ್ಥಾನವನ್ನು ಪಡೆದಿದ್ದಾರೆ.
ಫೋರ್ಬ್ಸ್ ಅಧ್ಯಯನ ವರದಿಯ ಪ್ರಕಾರ, ದೇಶದ ಶೇರುಪೇಟೆ ಚೇತರಿಕೆ ಹಾಗೂ ಆರ್ಥಿಕತೆ ಚೇತರಿಸಿಕೊಂಡಿದ್ದರಿಂದ ಭಾರತದ 100 ಶ್ರೀಮಂತ ವ್ಯಕ್ತಿಗಳ ಸಂಪತ್ತು 276 ಬಿಲಿಯನ್ ಡಾಲರ್‌ಗಳಿಂದ 300 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.
ಫೋರ್ಬ್ಸ್ ಪ್ರಕಾರ ಕಳೆದ ವರ್ಷವಿದ್ದ 52 ಬಿಲಿಯನೇರ್‌ಗಳಿದ್ದು, ಪ್ರಸಕ್ತ ವರ್ಷದ ಅವಧಿಯಲ್ಲಿ 69 ಬಿಲಿಯನೇರ್‌ಗಳಿಗೆ ಏರಿಕೆಯಾಗಿದೆ.
ಮುಕೇಶ್ ಅಂಬಾನಿಯ ನಂತರದ ಸ್ಥಾನವನ್ನು ಉಕ್ಕು ಕ್ಷೇತ್ರದ ಲಕ್ಷ್ಮಿ ಮಿತ್ತಲ್ 26.1 ಬಿಲಿಯನ್ ಡಾಲರ್‌ಗಳ ಸಂಪತ್ತಿನೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.
ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‌ಜಿ 17.6ಬಿಲಿಯನ್ ಡಾಲರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.ಮುಕೇಶ್ ಸಹೋದರ ಅನಿಲ್ ಅಂಬಾನಿ ಮೂರನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಎಸ್ಸಾರ್ ಎನರ್ಜಿ ಸಹೋದರರಾದ ಶಸಿ ಮತ್ತು ರವಿ ರುವೈಯಾ, 15 ಬಿಲಿ.ನ್ ಡಾಲರ್ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.