ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ನಾಳೆಯಿಂದ ಜಾರಿಗೆ ಬರುವಂತೆ ಠೇವಣಿ ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 75 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. ಆದರೆ ಸಾಲದ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಗಳನ್ನು ಘೋಷಿಸಿಲ್ಲ.
ಅಕ್ಚೋಬರ್ 1, 2010ರಿಂದ ಜಾರಿಗೆ ಬರುವಂತೆ ಠೇವಣಿ ಬಡ್ಡಿ ದರದಲ್ಲಿ 25-75ರಷ್ಟು ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ, ಮುಂಬೈ ಶೇರುಪೇಟೆಗೆ ಮಾಹಿತಿ ನೀಡಿದೆ.
ಆದರೆ, ಸಾಲದ ಮೇಲಿನ ಮೂಲ ಬಡ್ಡಿದರದಲ್ಲಿ ಯಾವುದೇ ಬದಲಾವಣೆಗಳು ಮಾಡಲಾಗಿಲ್ಲ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.
ಕಳೆದ ತಿಂಗಳು ಎಸ್‌ಬಿಐ ಬ್ಯಾಂಕ್,ಸಾಲದ ಮೇಲಿನ ಬಡ್ಡಿ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದು,ಠೇವಣಿ ಬಡ್ಡಿ ದರದಲ್ಲಿ 150 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಘೋಷಿಸಿತ್ತು.