ಮೊಂಟ್ರಿಯಲ್, ಗುರುವಾರ, 30 ಸೆಪ್ಟೆಂಬರ್ 2010( 18:00 IST )
ದೇಶದ ವೈಮಾನಿಕ ಕ್ಷೇತ್ರದಲ್ಲಿ 150 ಬಿಲಿಯನ್ ಡಾಲರ್‌ಕ್ಕಿಂತ ಹೆಚ್ಚಿನ ಹೂಡಿಕೆಗೆ ಅವಕಾಶಗಳಿದ್ದು,ಕೆನಡಾ ಮತ್ತು ಇತರ ಜಾಗತಿಕ ಕಂಪೆನಿಗಳು ಹೂಡಿಕೆ ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತ, ಕಡಿಮೆ ಅವಧಿಯಲ್ಲಿ ವೈಮಾನಿಕ ಕ್ಷೇತ್ರದಲ್ಲಿ ವೇಗವಾಗಿ ಸಾಗುತ್ತಿದ್ದು, ಸಾಗಬೇಕಾದ ದಾರಿ ತುಂಬಾ ದೂರವಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.
ದೇಶದ ನಾಗರಿಕ ವಿಮಾನಯಾನ ಕ್ಷೇತ್ರ ತುಂಬಾ ವಿಶಾಲವಾಗಿದ್ದು,150 ಬಿಲಿಯನ್ ಡಾಲರ್‌ಗಳ ಹೂಡಿಕೆಯ ಅಗತ್ಯತೆಯಿದೆ. ವಿಶ್ವದ ಹಲವು ರಾಷ್ಟ್ರಗಳ ಕಂಪೆನಿಗಳು ದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿಯನ್ನು ತೋರಿವೆ ಎಂದು ಹೇಳಿದ್ದಾರೆ.
ಭಾರತದ ವೈಮಾನಿಕ ಕ್ಷೇತ್ರ ಹಾಗೂ ಇತರ ವಿದೇಶಿ ಪಾಲುದಾರರೊಂದಿಗೆ ಕೈಜೋಡಿಸಿ, ಅಭಿವೃದ್ಧಿ ಪಥದತ್ತ ಸಾಗಬೇಕಾದ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.