ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸುಜುಕಿ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.45ರಷ್ಟು ಹೆಚ್ಚಳ (Suzuki Motorcycle | Sales up | GS150R | SlingShot)
Bookmark and Share Feedback Print
 
ದ್ವಿಚಕ್ರ ವಾಹನ ತಯಾರಿಕೆ ಸಂಸ್ಥೆಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, ಸೆಪ್ಟೆಂಬರ್ ತಿಂಗಳ ಅವಧಿಯ ಮಾರಾಟದಲ್ಲಿ ಶೇ.44.99ರಷ್ಟು ಏರಿಕೆಯಾಗಿದ್ದು, 22,534 ವಾಹನಗಳನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 15,542 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ನೀಡುತ್ತಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿದ್ದೇವೆ. ಮುಂಬರುವ ದಿನಗಳಲ್ಲಿ ಕೂಡಾ ವಾಹನಗಳ ಮಾರಾಟದಲ್ಲಿ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ಸುಜುಕಿ ಮೋಟಾರ್ ಸೈಕಲ್‌ ಇಂಡಿಯಾದ ಉಪಾಧ್ಯಕ್ಷ(ಮಾರಾಟ ಹಾಗೂ ಮಾರುಕಟ್ಟೆ)ಅತುಲ್ ಗುಪ್ತಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತಿಚೆಗೆ ಬಿಡುಗಡೆ ಮಾಡಲಾದ ಜಿಎಸ್‌150ಆರ್‌ ಮಾಡೆಲ್ ಹಾಗೂ ಸ್ಲಿಂಗ್‌ಶಾಟ್ ದ್ವಿಚಕ್ರ ವಾಹನಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಸುಜುಕಿ ಮೋಟಾರ್ ಸೈಕಲ್‌ ಇಂಡಿಯಾ ಲಿಮಿಟೆಡ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ