ಭಾರತದ ವಿಮಾನಯಾನ ಮಾರುಕಟ್ಟೆಗೆ ಮುಂಬರುವ 20 ವರ್ಷಗಳ ಅವಧಿಯಲ್ಲಿ 1 ಸಾವಿರ ಬೋಯಿಂಗ್ ವಿಮಾನಗಳ ಅಗತ್ಯತೆ ಎದುರಾಗುತ್ತದೆ ಎಂದು ವಿಮಾನ ತಯಾರಿಕೆ ಸಂಸ್ಥೆ ಏರ್‌ಬಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಎಂಡರ್ಸ್ ಹೇಳಿದ್ದಾರೆ.
ಅಮೆರಿಕದ ಪ್ರತಿಸ್ಪರ್ಧಿ ಕಂಪೆನಿಯಾದ ಏರ್‌ಬಸ್, ಭಾರತಕ್ಕೆ ಮುಂಬರುವ 20 ವರ್ಷಗಳ ಅವಧಿಯಲ್ಲಿ 1,150 ವಾಣಿಜ್ಯ ಜೆಟ್ ವಿಮಾನಗಳ ಅಗತ್ಯವಾಗಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಇಲಾಖೆಯೊಂದಿಗೆ 5.8 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಮಧ್ಯಮ ವರ್ಗದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ, ವಿಮಾನಗಳ ಬೇಡಿಕೆಯಲ್ಲಿ ಏರಿಕೆಯಾಗುತ್ತಿದೆ. ದೇಶದ ವೈಮಾನಿಕ ಕ್ಷೇತ್ರದಲ್ಲಿ ಹಲವು ನೂತನ ಕಂಪೆನಿಗಳು ಪ್ರವೇಶಿಸುತ್ತಿರುವುದರಿಂದ ವಿಮಾನಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಏರ್‌ಬಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಎಂಡರ್ಸ್ ಹೇಳಿದ್ದಾರೆ.