ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕ ಪ್ರಗತಿ; ಮೂರೇ ವರ್ಷದಲ್ಲಿ ಚೀನಾ ಹಿಂದಿಕ್ಕಲಿದೆ ಭಾರತ (India | China | infrastructure ratings | India’s economy)
Bookmark and Share Feedback Print
 
ಕಾಮನ್‌ವೆಲ್ತ್ ಗೇಮ್ಸ್ ಸಂಘಟನೆಗಾಗಿ ಭಾರತವು ಮೂಲಭೂತ ಸೌಕರ್ಯ ಕ್ರೋಢೀಕರಿಸುವಲ್ಲಿ ಎಡವಿದೆ ಎಂದು ಮಾಧ್ಯಮಗಳು ಬಿಂಬಿಸಿರುವ ಹೊತ್ತಿಗೆ ಅತ್ತ ಓರ್ವ ಆರ್ಥಿಕ ತಜ್ಞರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಮುಂದಿನ ಮೂರೇ ವರ್ಷದಲ್ಲಿ ಭಾರತವು ಚೀನಾವನ್ನು ಆರ್ಥಿಕ ಪ್ರಗತಿ ದರದಲ್ಲಿ ಹಿಂದಿಕ್ಕಲಿದೆ ಎಂದಿದ್ದಾರೆ.

ಪ್ರಗತಿಯ ನಿಟ್ಟಿನಲ್ಲಿ ದಕ್ಷಿಣ ಏಷಿಯಾದ ಈ ರಾಷ್ಟ್ರವು ಚೀನಾವನ್ನು ಕೇವಲ ಮೂರೇ ವರ್ಷಗಳಲ್ಲಿ ಹಿಂದಕ್ಕೆ ಹಾಕಲಿದೆ. ಅಷ್ಟೇ ಅಲ್ಲದೆ ಮುಂದಿನ 25 ವರ್ಷಗಳಲ್ಲಿ ಇತರ ಯಾವುದೇ ದೇಶ ಸಾಧಿಸದಷ್ಟು ಕ್ಷಿಪ್ರ ಪ್ರಗತಿಯನ್ನು ಭಾರತ ಕಾಣಲಿದೆ ಎಂದು ಅವರು ಲೇಖನವೊಂದರಲ್ಲಿ ಬರೆದಿದ್ದಾರೆ.

ಚೀನಾದ ಅರ್ಥವ್ಯವಸ್ಥೆಯು ಭಾರತದ ಅರ್ಥವ್ಯವಸ್ಥೆಗಿಂತ ನಾಲ್ಕು ಪಟ್ಟು ದೊಡ್ಡದು. ಆದರೆ 2013ರೊಳಗೆ ಚೀನಾದ ಪ್ರಗತಿ ದರವನ್ನು ಅದು ಹಿಂದಿಕ್ಕಲಿದೆ. ಕೆಲವು ಆರ್ಥಿಕ ತಜ್ಞರ ಪ್ರಕಾರ ಭಾರತವು ಮುಂದಿನ 25 ವರ್ಷಗಳಲ್ಲಿ ಇತರ ಯಾವುದೇ ಬೃಹತ್ ರಾಷ್ಟ್ರ ಸಾಧಿಸದ ಪ್ರಗತಿ ದರವನ್ನು ಹೊಂದಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ ಎಂದು ಹಲವರ ಉಲ್ಲೇಖಗಳನ್ನೊಳಗೊಂಡ ವರದಿಯೊಂದು ತಿಳಿಸಿದೆ.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಭಾರತದ ಪ್ರಗತಿ ದರವು ಶೇ.8.80ರ ಏರಿಕೆ ದಾಖಲಿಸಿದ್ದರೆ, ಕಳೆದ ವರ್ಷ ಚೀನಾವು ಶೇ.10.3ರ ಏರಿಕೆಯನ್ನು ಕಂಡಿದೆ. ಒಟ್ಟಾರೆ ದೇಶೀಯ ಉತ್ಪಾದನಾ ದರವನ್ನು ಪರಿಗಣನೆಗೆ ತೆಗೆದುಕೊಂಡರೆ ಭಾರತದ (1.16 ಟ್ರಿಲ್ಲಿಯನ್ ಅಮೆರಿಕಾ ಡಾಲರ್) ನಾಲ್ಕು ಪಟ್ಟು ಹೆಚ್ಚು ಸಾಧನೆ (4.33 ಟ್ರಿಲ್ಲಿಯನ್ ಡಾಲರ್) ಚೀನಾದ್ದು.

ಹೂಡಿಕೆದಾರರ ಬ್ಯಾಂಕ್ ಮೋರ್ಗನ್ ಸ್ಟಾಲೇಯಲ್ಲಿನ ಮೂಲಗಳನ್ನು ಉಲ್ಲೇಖಿಸಿರುವ ಪತ್ರಿಕಾ ವರದಿಯು, ಭಾರತವು ಯಶಸ್ವಿಯಾಗಿ ಶೇ.9ರಿಂದ 10ರ ಪ್ರಗತಿಯನ್ನು ಕಾಣಲಿದೆ. ಆದರೆ ಚೀನಾವು ಶೇ.8ರಷ್ಟಕ್ಕೆ ಸೀಮಿತವಾಗಲಿದೆ ಎಂದಿದೆ.

ಇದಕ್ಕಿರುವ ಕಾರಣ ಭಾರತದ ಜನಸಂಖ್ಯೆಯಲ್ಲಿನ ಕಾರ್ಯನಿರತ ವಯಸ್ಸಿನವರು. ಭಾರತದ ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆ 136 ಮಿಲಿಯನ್‌‌ನಷ್ಟು ಏರಿಕೆಯಾಗಲಿದ್ದರೆ, ಚೀನಾ ಕೇವಲ 23 ಮಿಲಿಯನ್ ಮಾತ್ರ ಹೆಚ್ಚಳ ಕಾಣಲಿದೆ.

ಭಾರತದ ಕಂಪನಿಗಳು ಕೂಡ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿವೆ. ಮುಕ್ತ ಮಾರುಕಟ್ಟೆಯನ್ನು ಹೊಂದಿರುವುದರಿಂದ ಹೆಚ್ಚಿನ ಅವಕಾಶಗಳನ್ನು ಭಾರತ ಬಾಚಿಕೊಳ್ಳುತ್ತಿದೆ. ಆದರೆ ಚೀನಾ ದೇಸಿ ವ್ಯವಸ್ಥೆಗೆ ಹೊಂದಿಕೊಂಡಿದೆ ಎಂದು ಅಭಿಪ್ರಾಯಪಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ