ಸುರಕ್ಷಿತವೇ? ಎಸ್‌ಬಿಐ ಕ್ಲಾರ್ಕ್ ಹುದ್ದೆಗೆ 3,800 ಇಂಜಿನಿಯರ್ಸ್
ಮುಂಬೈ, ಭಾನುವಾರ, 3 ಅಕ್ಟೋಬರ್ 2010( 15:03 IST )
ಇದೊಂದು ಅಚ್ಚರಿಕರ ಬೆಳವಣಿಗೆ ಎಂಬಂತೆ 3,800 ಮಂದಿ ಇಂಜಿನಿಯರ್ಸ್ ಹಾಗೂ 200 ಪದವೀಧರರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಲಾರ್ಕ್ ಪೋಸ್ಟ್‌ಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ.
ಎಸ್‌ಬಿಐ ಕಳೆದ ವರ್ಷ 27 ಸಾವಿರಕ್ಕೂ ಅಧಿಕ ಕ್ಲಾರ್ಕ್ ಪೋಸ್ಟ್‌ಗೆ ಬೇಕಾಗಿದ್ದಾರೆ ಎಂದು ಜಾಹೀರಾತು ಪ್ರಕಟಿಸಿತ್ತು. ಹಾಗಾಗಿ ದೇಶಾದ್ಯಂತ ಸುಮಾರು 38 ಲಕ್ಷ ಜನರು ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದರು. ಅದರಲ್ಲಿ 28 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ಅದರಲ್ಲಿ 88ಸಾವಿರ ಜನರು ಅರ್ಹ ಅಭ್ಯರ್ಥಿಗಳಾಗಿದ್ದು, 27 ಸಾವಿರ ಮಂದಿ ಆಯ್ಕೆಗೊಂಡು ಪರ್ಸನಲ್ ಸಂದರ್ಶನಕ್ಕೂ ಆಯ್ಕೆಯಾಗಿದ್ದರು. ಉದ್ಯೋಗ ನೀಡಿಕೆಯಲ್ಲಿ ಇದೊಂದು ಬೃಹತ್ ಆಯ್ಕೆ ಪ್ರಕ್ರಿಯೆಯಾಗಿತ್ತು ಎಂದು ಎಸ್‌ಬಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
27 ಸಾವಿರ ಮಂದಿಯಲ್ಲಿ 3,800 ಮಂದಿ ಇಂಜಿನಿಯರ್‌ಗಳು ಹಾಗೂ 200 ಮಂದಿ ಇಂಜಿನಿಯರಿಂಗ್ ವಿಭಾಗದ ಪದವೀಧರರು ಸೇರಿದ್ದಾರೆ. ಅಲ್ಲದೆ, 8,200 ಮಹಿಳೆಯರು ಹಾಗೂ 2 ಸಾವಿರ ಮಾಜಿ ಸರ್ವಿಸ್‌ಮೆನ್‌ಗಳು ಇದ್ದಾರೆ. ಅದರಲ್ಲೂ ಎಸ್‌ಬಿಐ ಬ್ಯಾಂಕ್‌ಗೆ ಇಂಜಿನಿಯರ್ಸ್‌ಗಳು ಸೇರ್ಪಡೆಗೊಂಡಿರುವುದು ತುಂಬಾ ಅಚ್ಚರಿ ತಂದಿದೆ ಎಂದು ಎಸ್‌ಬಿಐ ಅಧಿಕಾರಿಗಳು ಹೇಳಿದ್ದಾರೆ.
ಬ್ಯಾಂಕ್ ಹುದ್ದಗೆ ನಿಜಕ್ಕೂ ಟೆಕ್ನಿಕಲ್ ಪದವೀಧರರು ಭಾರೀ ಪ್ರಮಾಣದಲ್ಲಿ ಅರ್ಜಿ ಸಲ್ಲಿಸುತ್ತಾರೆಂಬುದನ್ನು ನಿರೀಕ್ಷಿಸಿರಲಿಲ್ಲ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.