ಉದ್ಯಮಿಗಳ ನಿಯೋಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಅಧ್ಯಕ್ಷತೆಯಲ್ಲಿ ಜರ್ಮನಿಗೆ ತೆರಳುತ್ತಿದ್ದು, ಅಮೆರಿಕದ ಹೊರಗುತ್ತಿಗೆ ನಿಷೇಧ ನಿರ್ಧಾರ ವಿರೋಧಿಸಿ, ಯುರೋಪ್ ರಾಷ್ಟ್ರಗಳ ಬೆಂಬಲ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಹೊರಗುತ್ತಿಗೆ ವಹಿವಾಟಿನಿಂದ ಅಮೆರಿಕಕ್ಕೆ ಲಾಭವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ. ಅದರಂತೆ ಜರ್ಮನಿ ಸೇರಿದಂತೆ ಇತರ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಎಫ್‌ಐಸಿಸಿಐ(ಫಿಕ್ಕಿ) ಅಧ್ಯಕ್ಷ ರಂಜನ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.
ಭಾರತದ ಉಧ್ಯಮಿಗಳ ನಿಯೋಗ ಅಕ್ಟೋಬರ್ 6 ರಿಂದ ಅಕ್ಟೋಬರ್ 8 ರವರೆಗೆ ಜರ್ಮನಿಗೆ ಪಯಣಿಸಲಿದೆ ಎಂದು ಫಿಕ್ಕಿ ಮೂಲಗಳು ತಿಳಿಸಿವೆ.
ಯುರೋಪ್‌ನ 27 ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರವಾದ ಜರ್ಮನಿಗೆ, ಹೊರಗುತ್ತಿಗೆ ವಹಿವಾಟಿನಿಂದ ಸಹಕಾರಿಯಾಗುವ ಅಂಶಗಳನ್ನು ಜರ್ಮನಿಯ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ಭಾರ್ತಿ ಗ್ರೂಪ್ ಟೆಲಿಕಾಂ ಕಂಪೆನಿ, ಜರ್ಮನಿ ಮೂಲದ ಐಬಿಎಂ ಕಂಪೆನಿಗೆ ಬಹು ಬಿಲಿಯನ್ ಡಾಲರ್ ಹೊರಗುತ್ತಿಗೆ ನೀಡಿರುವುದನ್ನು ಉದಾಹರಿಸಿದ ಮಿತ್ತಲ್, ಹೊರಗುತ್ತಿಗೆ ವಹಿವಾಟಿನಲ್ಲಿ ದೇಶದ ಆರ್ಥಿಕತೆಯಲ್ಲಿ ಚೇತರಿಕೆಯಾಗಲಿದೆ ಎಂದರು.