ಉಕ್ಕು ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರತಿ ಟನ್‌ಗೆ 1,500 ರೂಪಾಯಿಗಳಷ್ಟು ದರ ಹೆಚ್ಚಳ ಘೋಷಿಸಲಾಗಿದೆ ಎಂದು ಟಾಟಾ ಸ್ಟೀಲ್ ಕಂಪೆನಿಯ ಮೂಲಗಳು ತಿಳಿಸಿವೆ.
ಪ್ರತಿ ಟನ್‌ಗೆ ಶೇ.3ರಷ್ಟು ದರ ಹೆಚ್ಚಳವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ ಎಂದು ಟಾಟಾ ಸ್ಟೀಲ್ ವಕ್ತಾರರು ತಿಳಿಸಿದ್ದಾರೆ.
ಟಾಟಾ ಸ್ಟೀಲ್ ಕಂಪೆನಿ ಪ್ರತಿ ಟನ್‌ಗೆ 1500 ರೂಪಾಯಿಗಳ ಹೆಚ್ಚಳ ಘೋಷಿಸಿದ್ದರಿಂದ, ಇತರ ಸ್ಟೀಲ್ ಕಂಪೆನಿಗಳಾದ ಸೇಲ್ ಜೆಎಸ್‌ಡಬ್ಲೂ ಮತ್ತು ಎಸ್ಸಾರ್ ಸ್ಟೀಲ್ ಕಂಪೆನಿಗಳು ಕೂಡಾ ದರ ಏರಿಕೆ ಘೋಷಿಸುವ ಸಾಧ್ಯತೆಗಳಿವೆ ಎಂದು ಉಕ್ಕು ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಸೇಲ್ ಉಕ್ಕು ಕಂಪೆನಿ ಪ್ರತಿ ಟನ್‌ಗೆ 1000 ರೂಪಾಯಿ, ಜೆಎಸ್‌ಡಬ್ಲೂ ಸ್ಟೀಲ್ ಮತ್ತು ಎಸ್ಸಾರ್ ಸ್ಟೀಲ್ ಕಂಪೆನಿಗಳು ತಲಾ ಪ್ರತಿ ಟನ್‌ಗೆ1500 ರೂಪಾಯಿ ದರ ಹೆಚ್ಚಳ ಘೋಷಿಸಿದೆ.