ಚಿನಿವಾರಪೇಟೆ : ಚಿನ್ನದ ದರದಲ್ಲಿ ಅಲ್ಪ ಕುಸಿತ, ಬೆಳ್ಳಿ ದರ ಏರಿಕೆ
ನವದೆಹಲಿ, ಸೋಮವಾರ, 4 ಅಕ್ಟೋಬರ್ 2010( 15:27 IST )
ಕೈಗಾರಿಕೋದ್ಯಮ ಹಾಗೂ ನಾಣ್ಯಗಳ ತಯಾರಕರಿಂದ ಬೇಡಿಕೆಯಲ್ಲಿ ಹೆಚ್ಚಳದಿಂದಾಗಿ, ಬೆಳ್ಳಿಯ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ ಪ್ರತಿ ಕೆಜಿಗೆ 130 ರೂಪಾಯಿಗಳ ಏರಿಕೆಯಾಗಿ 33,700 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ಚಿನ್ನದ ದರ ಪ್ರತಿ 10 ಗ್ರಾಂಗೆ 10 ರೂಪಾಯಿಗಳಷ್ಟು ಇಳಿಕೆಯಾಗಿ 19,930 ರೂಪಾಯಿಗಳಾಗಿದೆ.
ಕೈಗಾರಿಕೋದ್ಯಮ ಹಾಗೂ ನಾಣ್ಯಗಳ ತಯಾರಕರಿಂದ ಬೇಡಿಕೆಯಲ್ಲಿ ಹೆಚ್ಚಳದಿಂದಾಗಿ, ಬೆಳ್ಳಿಯ ದರ ಏರಿಕೆಗೆ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ಚಿನ್ನದ ಸಂಗ್ರಹಕಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದರಿಂದ, ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬೆಳ್ಳಿಯ (100 ನಾಣ್ಯಗಳು) ದರದಲ್ಲಿ ಕೂಡಾ 100 ರೂಪಾಯಿಗಳ ಏರಿಕೆಯಾಗಿ, 35,400 ರೂಪಾಯಿಗಳಿಗೆ ತಲುಪಿದೆ.