ಗಲ್ಫ್ ಪ್ರದೇಶದಲ್ಲಿ ವಹಿವಾಟಿಗೆ ದುಬೈ ಸೂಕ್ತ ನಗರವಾಗಿದ್ದು, ಆದರೆ, ವಹಿವಾಟು ಆರಂಭಕ್ಕೆ ಹೆಚ್ಚಿನ ಬಂಡವಾಳದ ಅಗತ್ಯವಿದೆ ಎಂದು ನೂತನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
ಕುಶ್‌ಮ್ಯಾನ್ ಬರೆದ 'ರಿಟ್ರೇಡಿಂಗ್ ದಿ ಸಿಲ್ಕ್ ರೋಡ್' ಮತ್ತು ವೇಕ್‌ಫಿಲ್ಡ್ ಮಿಡ್ಲ್‌ಈಸ್ಟ್ ಆಧಾರಿತ ಫೀಡ್‌ಬ್ಯಾಕ್‌ಗಳನ್ನು ಪಡೆದ ಅಧ್ಯಯನ ಸಂಸ್ಥೆ ದಕ್ಷಿಣ ಏಷ್ಯಾ ಮತ್ತು ಏಷ್ಯಾ ಫೆಸಿಫಿಕ್ ವಲಯಗಳಲ್ಲಿ ವಾಣಿಜ್ಯ ಕಂಪೆನಿಗಳ ವಹಿವಾಟಿನಲ್ಲಿ ಗಮನಾರ್ಹ ವೃದ್ಧಿಯಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
ಚೀನಾ ಮತ್ತು ಭಾರತೀಯ ಮೂಲದ ಕಂಪೆನಿಗಳು ಈಗಾಗಲೇ ದುಬೈನಲ್ಲಿ ಹಲವಾರು ಕಂಪೆನಿಗಳನ್ನು ಹುಟ್ಟುಹಾಕಿದ್ದು, ನೂತನ ಕಂಪೆನಿಗಳು ಕೂಡಾ ದುಬೈಗೆ ಲಗ್ಗೆಯಿಡುತ್ತಿವೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.
ದುಬೈಯಲ್ಲಿರುವ ಉತ್ಕ್ರಷ್ಟ ಮಟ್ಟದ ಮೂಲಸೌಕರ್ಯಗಳು ಹಾಗೂ ಉತ್ತಮ ಸಾರಿಗೆ ವ್ಯವಸ್ಥೆ ಮತ್ತು ಕೈಗಾರಿಕೋದ್ಯಮಕ್ಕೆ ಪೂರಕ ವಾತಾವರಣದಿಂದಾಗಿ ಭಾರತ ಮತ್ತು ಚೀನಾ ದೇಶಗಳು ಹೂಡಿಕೆಗಾಗಿ ಹೆಚ್ಚಿನ ಆಸಕ್ತಿ ಹೊಂದಿವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.