ಯುದ್ಧಗ್ರಸ್ಥ ರಾಷ್ಟ್ರವಾದ ಇರಾಕ್ ವಾರ್ಷಿಕವಾಗಿ 143 ಬಿಲಿಯನ್ ಬ್ಯಾರೆಲ್ ತೈಲ ಉತ್ಪಾದಿಸಿ, ವಿಶ್ವ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಇರಾನ್ ದೇಶವನ್ನು ಹಿಂದಕ್ಕೆ ತಳ್ಳಿ ಮೂರನೇ ಸ್ಥಾನಕ್ಕೆ ತಲುಪಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ಅವಧಿಯ ತೈಲ ಉತ್ಪಾದನೆಯಲ್ಲಿ ಶೇ.24ರಷ್ಟು ಹೆಚ್ಚಳವಾಗಿ 115 ಬಿಲಿಯನ್ ಬ್ಯಾರೆಲ್‌ಗಳಿಂದ 143.1 ಬಿಲಿಯನ್ ಬ್ಯಾರೆಲ್‌ಗಳಿಗೆ ಏರಿಕೆಯಾಗಿದೆ.
ಪೆಟ್ರೋಲ್ ರಫ್ತು ರಾಷ್ಟ್ರಗಳ ಸಂಘಟನೆಯಾದ ಒಪೆಕ್‌ನಲ್ಲಿ ಸೌದಿ ಅರೇಬಿಯಾ ಮತ್ತು ವೆನೆಜುವೆಲಾ ನಂತರ ಇರಾಕ್ ಸ್ಥಾನಪಡೆದಿದೆ.
ಇರಾಕ್‌ನ ತೈಲ ಮೀಸಲು ಸಂಗ್ರಹ 143.1 ಬಿಲಿಯನ್ ಬ್ಯಾರೆಲ್ಸ್‌ಗೆ ತಲುಪುವ ನಿರೀಕ್ಷೆಗಳಿವೆ ಎಂದು ಇರಾಕ್‌ನ ತೈಲ ಖಾತೆ ಸಚಿವ ಹುಸೇನ್ ಅಲ್-ಶಹರಿಸ್ತಾನಿ ಹೇಳಿದ್ದಾರೆ.
ದೇಶದ ಶೇ.71ರಷ್ಟು ತೈಲ ಬಾವಿಗಳು ದಕ್ಷಿಣ ಭಾಗದಲ್ಲಿದ್ದು, ಶೇ.20ರಷ್ಟು ಉತ್ತರ ಮತ್ತು ಶೇ.10ರಷ್ಟು ಕೇಂದ್ರ ಭಾಗದಲ್ಲಿ ಲಭ್ಯವಿವೆ ಎಂದು ತಿಳಿಸಿದ್ದಾರೆ.