ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟ್ವಿಟ್ಟರ್ ನೂತನ ಸಿಇಒ ಸ್ಥಾನಕ್ಕೆ ಡಿಕ್ ಕೊಸ್ಟೊಲೊ ನೇಮಕ (Twitter | Micro-blog | Evan Williams | Dick Costolo)
Bookmark and Share Feedback Print
 
ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಇವಾನ್ ವಿಲಿಯಮ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಡಿಕ್ ಕೊಸ್ಟೊಲೊ ಅವರನ್ನು ನೂತನ ಸಿಇಒ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟ್ವಿಟ್ಟರ್‌ನ ಮುಖ್ಯ ಕಾರ್ಯಾಚರಣೆಯ ಅಧಿಕಾರಿಯಾಗಿದ್ದ ಕೊಸ್ಟೊಲೊ, ಕಳೆದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಟ್ವಿಟ್ಟರ್ ಕಂಪೆನಿಗೆ ಸೇರ್ಪಡೆಯಾಗಿದ್ದು, ಜಾಹೀರಾತು ವಿಭಾಗದಲ್ಲಿ ಹೆಚ್ಚಿನ ಸಾಧನೆ ತೋರಿದ್ದಾರೆ ೆಂದು ಕಂಪೆನಿಯ ಮೂಲಗಳು ತಿಳಿಸಿವೆ.

38 ವರ್ಷ ವಯಸ್ಸಿನ ವಿಲಿಯಮ್ಸ್ ಮಾತನಾಡಿ, ಟ್ವಿಟ್ಟರ್ ಕಂಪೆನಿ ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ನಮ್ಮ ಗುರಿಯನ್ನು ಸಾಧಿಸಿ, ಕಂಪೆನಿಯನ್ನು ಲಾಭದತ್ತ ತೆಗೆದುಕೊಂಡು ಹೋಗುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಟ್ವಿಟ್ಟರ್ ಕಂಪೆನಿಯಲ್ಲಿ ವಿಲಿಯಮ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಿಬ್ಬಂದಿಗಳ ಸಂಖ್ಯೆಯಲ್ಲಿ 20ರಷ್ಟು ಹೆಚ್ಚಳವಾಗಿದ್ದು, ಪ್ರಸ್ತುತ 300 ಉದ್ಯೋಗಿಗಳಿದ್ದಾರೆ.

ಟ್ವಿಟ್ಟರ್ ಕಂಪೆನಿ ಪ್ರಸ್ತುತ 1 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ ಎಂದು ಖಾಸಗಿ ಹೂಡಿಕೆದಾರರು ಅಂದಾಜು ಮಾಡಿದ್ದಾರೆ.

ಹಿಂದಿನ ಮೂರು ವರ್ಷಕ್ಕೆ ಹೋಲಿಸಿದಲ್ಲಿ ಪ್ರಸ್ತುತ ಟ್ವಿಟ್ಟರ್ ಬಳಕೆದಾರರ ಸಂಖ್ಯೆ 165 ಮಿಲಿಯನ್‌ಗಳಿಗೆ ತಲುಪಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಟ್ವಿಟ್ಟರ್ ಡಾಟ್ ಕಾಮ್ ಬಳಕೆದಾರರ ಸಂಖ್ಯೆಯಲ್ಲಿ ಶೇ.76ರಷ್ಟು ಹೆಚ್ಚಳವಾಗಿ 96 ಮಿಲಿಯನ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ