ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ದರ ಏರಿಕೆಯಿಂದ ಕಳವಳ ಹೆಚ್ಚಳ:ಗೋಕರ್ಣ್ (Inflation, RBI, Subir Gokarn | Comfort zone)
Bookmark and Share Feedback Print
 
ನಿರಂತರವಾಗಿ ಏರಿಕೆಯಾಗುತ್ತಿರುವ ಹಣದುಬ್ಬರ ದರ ಕುರಿತಂತೆ ಕಳವಳ ವ್ಯಕ್ತಪಡಿಸಿದ ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪಗೌವರ್ನರ್ ಸುಬೀರ್ ಗೋಕರ್ಣ, ರಿಸರ್ವ್ ಬ್ಯಾಂಕ್‌ನ ಸಮಧಾನಕರ ವಲಯದಿಂದ ಮೇಲ್ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಪ್ರಸ್ತುತ ಹಣದುಬ್ಬರ ದರದ ಸ್ಥಿತಿ, ಆತಂಕಪಡುವಂತಹದಾಗಿದ್ದು, ಹಣದುಬ್ಬರ ನಿಯಂತ್ರಣಕ್ಕಾಗಿ ಹಲವಾರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ನಿಯಮಗಳನ್ನು ಸಾಮಾನ್ಯ ಸ್ಥಿತಿಗೆ ಇಳಿಕೆಗೊಳಿಸುವ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ. ಅಭಿವೃದ್ಧಿ ಮತ್ತು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ನೀತಿಗಳಲ್ಲಿ ಬದಲಾವಣೆ ತರಲಾಗುವುದು. ಪ್ರಸಕ್ತ ವರ್ಷದಲ್ಲಿ ಆರ್‌ಬಿಐ ಐದು ಬಾರಿ ಬಡ್ಡಿ ದರದಲ್ಲಿ ಹೆಚ್ಚಳಗೊಳಿಸಿದೆ ಎಂದು ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳು ಆರ್ಥಿಕ ಪರಿಷ್ಕರಣ ಸಭೆ ನಡೆಸಲಿದ್ದು, ಮತ್ತಷ್ಟು ರೆಪೋ ದರಗಳಲ್ಲಿ ಏರಿಕೆಗೊಳಿಸುವ ಸಾಧ್ಯತೆಗಳಿವೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ