ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 38 ಪೈಸೆ ಏರಿಕೆಯಾಗಿ 44.30 ರೂಪಾಯಿಗಳಿಗೆ ತಲುಪಿದೆ.
ಅದನ್ನು, ಹೊರತುಪಡಿಸಿ, ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ 8 ತಿಂಗಳ ಕುಸಿತ ಕಂಡ ಹಿನ್ನೆಲೆಯಲ್ಲಿ, ರೂಪಾಯಿ ಮೌಲ್ಯದ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 10 ಪೈಸೆ ಇಳಿಕೆ ಕಂಡು 44.68/69 ರೂಪಾಯಿಗಳಿಗೆ ತಲುಪಿತ್ತು.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ 262.24 ಪಾಯಿಂಟ್‌ಗಳ ಏರಿಕೆ ಕಂಡು 20,669.95 ಅಂಕಗಳಿಗೆ ತಲುಪಿದೆ.