ಬ್ಯಾಂಕ್‌ಗಳು ಮೂಲ ಬಡ್ಡಿ ದರ ಏರಿಕೆ ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ, ನಿಮ್ಮ ಮಾಸಿಕ ಕಂತಿನ ಮೊತ್ತದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಬ್ಯಾಂಕ್‌ಗಳು ಸಾಲ ಪಡೆಯುವ ಗ್ರಾಹಕರಿಗೆ ನೀಡುವ ಕನಿಷ್ಠ ಬಡ್ಡಿ ದರ ಮೂಲ ಬಡ್ಡಿ ದರವಾಗಿದೆ.
ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಐಸಿಐಸಿಐ ಬ್ಯಾಂಕ್, ಗೃಹಸಾಲದ ಮೇಲಿನ ಬಡ್ಡಿದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಗೊಳಿಸಿ ಶೇ.8.5ಕ್ಕೆ ನಿಗದಿಪಡಿಸಿದೆ.
ಮತ್ತೊಂದು ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಕೂಡಾ, ಮೂಲಬಡ್ಡಿದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿ ಶೇ.7.75ಕ್ಕೆ ನಿಗದಿಪಡಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ಕನಿಷ್ಠ ಬಡ್ಡಿ ದರವನ್ನು ಹೆಚ್ಚಳಗೊಳಿಸಿ ಶೇ.8.5ಕ್ಕೆ ನಿಗದಿಪಡಿಸಿದೆ. ಎಕ್ಸಿಸ್ ಬ್ಯಾಂಕ್ ಕೊಟಾಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಕೂಡಾ ಮೂಲ ಬಡ್ಡಿದರ ಏರಿಕೆ ಘೋಷಿಸಿವೆ.
ಆದರೆ, ದೇಶದ ಸರಕಾರಿ ಸ್ವಾಮ್ಯದ ಅಗ್ರಬ್ಯಾಂಕ್ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ,ಮೂಲ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಘೋಷಿಸಿಲ್ಲ ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.