ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೈಲ್ವೆ ನಿವ್ವಳ ಆದಾಯದಲ್ಲಿ ಶೇ.7.83ರಷ್ಟು ಹೆಚ್ಚಳ (Railways | Earnings | Goods | Passenger | Revenue)
Bookmark and Share Feedback Print
 
ಭಾರತೀಯ ರೈಲ್ವೆ ಇಲಾಖೆ ಏಪ್ರಿಲ್‌-ಸೆಪ್ಟೆಂಬರ್ ತಿಂಗಳ ಅವಧಿಯವರೆಗೆ ನಿವ್ವಳ ಆದಾಯದಲ್ಲಿ ಶೇ.7.83ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳವರೆಗಿನ ಅವಧಿಯಲ್ಲಿ ರೈಲ್ವೆ ಇಲಾಖೆ ನಿವ್ವಳ ಆದಾಯ 44,323.70 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಏಪ್ರಿಲ್- ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ನಿವ್ವಳ ಆದಾಯ 41,104.78ಕೋಟಿ ರೂಪಾಯಿಗಳಾಗಿತ್ತು ಎಂದು ರೈಲ್ವೆ ಇಲಾಖೆ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.

ಸರಕು ಸಾಗಾಣೆ ಆದಾಯದಲ್ಲಿ ಶೇ.6.57ರಷ್ಟು ಹೆಚ್ಚಳವಾಗಿದ್ದು, 29,443.32 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಏಪ್ರಿಲ್- ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ನಿವ್ವಳ ಆದಾಯ 27,629.01 ಕೋಟಿ ರೂಪಾಯಿಗಳಾಗಿತ್ತು.

ಪ್ರಯಾಣಿಕ ಆದಾಯದಲ್ಲಿ ಶೇ.9.64ರಷ್ಟು ಹೆಚ್ಚಳವಾಗಿದ್ದು 12,689.36 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ 2009ರ ಅವಧಿಯಲ್ಲಿ 11,573.60 ಕೋಟಿ ರೂಪಾಯಿಗಳಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ