ಕಳೆದ ವರ್ಷ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತಂದೆ ವೈ.ಎಸ್.ರೆಡ್ಡಿ ನಿಧನದ ನಂತರ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿರುವ ಜಗನ್‌ಮೋಹನ್ ರೆಡ್ಡಿ , ವೈಯಕ್ತಿಕ ಸಂಪತ್ತಿನ ಕುರಿತಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳ ಮುಂಗಡ 84 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿ ಹುಬ್ಬೇರುವಂತೆ ಮಾಡಿದ್ದಾರೆ.ಇದರಿಂದಾಗಿ ವಾರ್ಷಿಕ 500 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆದಾಯವಿದೆ ಎನ್ನುವುದು ಖಚಿತವಾದಂತಾಗಿದೆ.
ಜಗನ್ಮೋಹನ್ ರೆಡ್ಡಿಯವರ ಆದಾಯದಿಂದ, ದೇಶದ ಬೃಹತ್ ಕಾರ್ಪೋರೇಟ್ ಕಂಪೆನಿಗಳಾದ ಟಾಟಾ ಬಿರ್ಲಾ ಮತ್ತು ಅಂಬಾನಿಗಳನ್ನು ಕೂಡಾ ನಾಚಿಸುವಂತಾಗಿದೆ.
ಕಳೆದ 2008-09ರ ಅವಧಿಯಲ್ಲಿ 2.92 ಲಕ್ಷ ರೂಪಾಯಿಗಳ ತೆರಿಗೆಯನ್ನು ಪಾವತಿಸಿದ್ದ ರೆಡ್ಡಿ, 2009-10ರ ಅವಧಿಯಲ್ಲಿ 6.72ಕೋಟಿ ರೂಪಾಯಿಗಳ ತೆರಿಗೆಯನ್ನು ಪಾವತಿಸಿದ್ದಾರೆ.ಆರು ತಿಂಗಳ ಅವಧಿಯ ಆದಾಯದಲ್ಲಿ ಶೇ.1,100ರಷ್ಟು ಹೆಚ್ಚಳವಾದಂತಾಗಿದೆ.
ಗಣಿದಣಿಗಳಾದ ಕರ್ನಾಟಕದ ಪ್ರವಾಸೋದ್ಯಮ ಸಚಿವ ಜನಾರ್ಧನ್ ರೆಡ್ಡಿ ಪತ್ನಿ ಗಾಲಿ ಲಕ್ಷ್ಮಿ ಅರುಣಾ ಮತ್ತು ಕಮಲ್‌ಜಿತ್ ಸಿಂಗ್ ಆಹ್ಲುವಾಲಿಯಾ.ಒರಿಸ್ಸಾದ ರಾಮಾಮೂರ್ತಿ ಪ್ರವೀಣ್ ಚಂದ್ರಾ ಗರಿಷ್ಠ ತೆರಿಗೆ ಪಾವತಿಸಿದವರಲ್ಲಿ ಮುಂಚೂಣಿಯಲ್ಲಿದ್ದಾರೆ.
ಟೆಲಿಕಾಂ ಅಧಿಕಾರಿಯಾಗಿ ನಂತರ ಹುದ್ದೆಗೆ ರಾಜೀನಾಮೆ ನೀಡಿ ಉದ್ಯಮಿಯಾಗಿ ಪರಿವರ್ತನೆಗೊಂಡ ನಂತರ 20.78 ಕೋಟಿ ರೂಪಾಯಿಗಳ ಮುಂಗಡ ತೆರಿಗೆಯನ್ನು ಪಾವತಿಸಿದ್ದಾರೆ.