ದೇಶದ ಕೈಗಾರಿಕೆ ವೃದ್ಧಿ ದರ ಕಳೆದ ವರ್ಷದ ಅಗಸ್ಟ್ ತಿಂಗಳಿಗೆ ಹೋಲಿಸಿದಲ್ಲಿ ಶೇ.5.6ಕ್ಕೆ ಕುಸಿದಿರುವುದು ಕೈಗಾರಿಕೆ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಕೈಗಾರಿಕೆ ವೃದ್ಧಿ ದರ ಅಗಸ್ಟ್ ತಿಂಗಳಲ್ಲಿ ಶೇ.9.5ಕ್ಕೆ ಚೇತರಿಕೆಯಾಗುವ ನಿರೀಕ್ಷೆಗಳಿವೆ ಎಂದು ಅಂದಾಜಿಸಲಾಗಿತ್ತು. ಇತ್ತಿಚಿನ ದಿನಗಳಲ್ಲಿ ಶೇರುಪೇಟೆಯ ಸೂಚ್ಯಂಕ 200 ಪಾಯಿಂಟ್‌ಗಳ ಇಳಿಕೆ ಕಂಡು ಕೈಗಾರಿಕೆ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಕಳೆದ ಅಗಸ್ಟ್ 2009ರ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.10.6 ಕ್ಕೆ ಏರಿಕೆಯಾಗಿತ್ತು.ಆದರೆ, ಪ್ರಸಕ್ತ ವರ್ಷದ ಆರಂಭಿಕ ಆರು ತಿಂಗಳ ಅವಧಿಯಲ್ಲಿ ಶೇ.5.6ಕ್ಕೆ ಕುಸಿತ ಕಂಡಿದೆ.