ದೇಶದ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್,ಸ್ಪೋರ್ಟ್ಸ್ ಮತ್ತು ಬಹುಪಯೋಗಿ ಮಾಡೆಲ್ 'ಟಾಟಾ ಅರಿಯಾ' ಕಾರನ್ನು ಮಾರುಕಟ್ಟೆಗೆ ಇಂದು ಬಿಡುಗಡೆಗೊಳಿಸಿದೆ.
'ಟಾಟಾ ಅರಿಯಾ' ಮಾಡೆಲ್ ಕಾರನ್ನು ಶೀಘ್ರದಲ್ಲಿ ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ ರಾಷ್ಟ್ರಗಳಿಗೆ ರಫ್ತು ಮಾಡಲು ನಿರ್ಧರಿಸಲಾಗಿದೆ. ಯುರೋಪ್‌ನ ಪರಿಸರ ನಿಯಮಗಳಿಗೆ ಅನ್ವಯವಾಗುವಂತೆ ಕಾರಿನ ವಿನ್ಯಾಸ ರೂಪಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ತೆಲಂಗ್ ಹೇಳಿದ್ದಾರೆ.
ಮುಂದಿನ ವರ್ಷದ ಅವಧಿಯಲ್ಲಿ ಎಡ-ಚಾಲನೆಯ ಆವೃತ್ತಿಯನ್ನು (ರಫ್ತಿಗಾಗಿ)ಮಾತರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ. ಆರು ಆಸನಗಳುಳ್ಳ ಕಾರಿನ ದರವನ್ನು ಇಂದು ಸಂಜೆ ಘೋಷಿಸಲಾಗುತ್ತಿದೆ. ಆದರೆ, ಕಾರಿನ ದರವನ್ನು 15 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಇಟಲಿ, ಸ್ಪೇನ್ ಮತ್ತು ಪೊಲ್ಯಾಂಡ್ ದೇಶಗಳಲ್ಲಿ ಕಂಪೆನಿಯ ಘಟಕಗಳಿರುವುದರಿಂದ, 'ಟಾಟಾ ಅರಿಯಾ' ಮಾಡೆಲ್ ಕಾರನ್ನು ಆಯಾ ದೇಶಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ ಎಂದು ತೆಲಂಗ್ ತಿಳಿಸಿದ್ದಾರೆ.