ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕ್ರೆಡಿಟ್ ಕಾರ್ಡ್‌ ಹಣ ವರ್ಗಾವಣೆಯಲ್ಲಿ ಶೇ.29ರಷ್ಟು ಹೆಚ್ಚಳ (Credit cards, Transaction, Reserve Bank of India, Debit card)
Bookmark and Share Feedback Print
 
ಕಳೆದ ಅಗಸ್ಟ್ ತಿಂಗಳ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಶೇ.28.29ರಷ್ಟು ಹೆಚ್ಚಳವಾಗಿದ್ದು, 6,259.42 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಅಗಸ್ಟ್ 2009ರ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಹಣ ವರ್ಗಾವಣೆ 5,817.46 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಏತನ್ಮಧ್ಯೆ ಕ್ರೆಡಿಟ್ ಕಾರ್ಡ್ ಗ್ರಾಹಕರ ಸಂಖ್ಯೆ 2009ರ ಆರ್ಥಿಕ ವರ್ಷದ ಅವಧಿಯಲ್ಲಿ 2.19 ಕೋಟಿಗಳಾಗಿತ್ತು. 2010ರ ಅಗಸ್ಟ್ 31ಕ್ಕೆ ಅಂತ್ಯಗೊಂಡಂತೆ 1.89 ಕೋಟಿಗೆ ಇಳಿಕೆಯಾಗಿದೆ.

ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಐದು ತಿಂಗಳುಗಳ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಹಣ ವರ್ಗಾವಣೆಯಲ್ಲಿ ಶೇ.18.82ರಷ್ಟು ಏರಿಕೆಯಾಗಿ 29,024.75 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ 24,427.33 ಕೋಟಿ ರೂಪಾಯಿಗಳಾಗಿತ್ತು.

ಏತನ್ಮಧ್ಯೆ, ಡೆಬಿಟ್ ಕಾರ್ಡ್ ಬಳಕೆಯಲ್ಲಿ ಶೇ.42.32 ರಷ್ಟು ಹೆಚ್ಚಳವಾಗಿ 3,321.09 ಕೋಟಿ ರೂಪಾಯಿಗಳಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ