ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೀಜನ್ ಬೇಡಿಕೆ: ಚಿನ್ನ, ಬೆಳ್ಳಿ ದರದಲ್ಲಿ ಅಲ್ಪ ಏರಿಕೆ (Gold | Silver | Jewellers | Global trend | Seasonal demand | Global markets)
Bookmark and Share Feedback Print
 
ದೇಶದ ಚಿನಿವಾರಪೇಟೆಯಲ್ಲಿ ಚಿನ್ನಾಭರಣಗಳ ತಯಾರಕರು ಹಾಗೂ ಚಿನ್ನದ ಸಂಗ್ರಹಕಾರರು ಚಿನ್ನದ ಖರೀದಿಯಲ್ಲಿ ತೊಡಗಿದ್ದರಿಂದ, ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಅಲ್ಪ ಏರಿಕೆಯಾಗಿದೆ.

ಚಿನ್ನದ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 25 ರೂಪಾಯಿಗಳ ಏರಿಕೆಯಾಗಿ 19,945 ರೂಪಾಯಿಗಳಿಗೆ ತಲುಪಿದೆ.ಬೆಳ್ಳಿಯ ದರ ಪ್ರತಿ ಕೆಜಿಗೆ 400 ರೂಪಾಯಿಗಳಷ್ಟು ಹೆಚ್ಚಳವಾಗಿ 35,800 ರೂಪಾಯಿಗಳಿಗೆ ತಲುಪಿದೆ.

ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ದೇಶಿಯ ಮಾರುಕಟ್ಟೆಗಳಲ್ಲಿ ಕೂಡಾ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 7.10 ಡಾಲರ್‌ಗಳ ಏರಿಕೆಯಾಗಿ 1,357.60 ಡಾಲರ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ