ಬ್ಲ್ಯಾಕ್‌ಬೆರಿ ಮೊಬೈಲ್‌ಗಳ ನಡುವೆ ಹರಿದಾಡುವ ಸಂದೇಶಗಳ ಮೇಲೆ ನಿಗಾ ಇಡುವ ಕಾರಣಕ್ಕಾಗಿ ವೀಕ್ಷಣೆಗೆ ತನಗೆ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಬ್ಲ್ಯಾಕ್‌ಬೆರಿ ತಯಾರಿಕಾ ಸಂಸ್ಥೆ ರಿಸರ್ಚ್ ಇನ್ ಮೋಷನ್ (ಆರ್‌ಐಎಂ)ಗೆ ಸೂಚಿಸಿದೆ. ಜೊತೆಗೆ, ಈ ಕುರಿತು ಡಿಸೆಂಬರ್ 31ರೊಳಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದೆ.
ಬ್ಲ್ಯಾಕ್‌ಬೆರಿ ಮೊಬೈಲ್‌ಗಳಲ್ಲಿ ಹರಿದಾಡುವ ಸಂದೇಶಗಳ ಮೂಲ ಪತ್ತೆ ಹಚ್ಚುವುದು ತೀರಾ ಕಷ್ಟಕರವಾಗಿರುವುದರಿಂದ ಇಂಥವುಗಳನ್ನು ಭಯೋತ್ಪಾದಕ ಚಟುವಟಿಕೆಗಳಲ್ಲಿ ಬಳಸುವ ಸಂಭವ ಹೆಚ್ಚು ಎಂಬ ಕಾರಣಕ್ಕೆ ಸರ್ಕಾರ ಈ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಸುಮಾರು 10 ಲಕ್ಷ ಜನರು ಬ್ಲ್ಯಾಕ್‌ಬೆರಿ ಮೊಬೈಲ್‌ಗಳನ್ನು ಬಳಸುತ್ತಿದ್ದು, ಈ ಮೊಬೈಲ್‌ಗಳಲ್ಲಿ ಹರಿದಾಡುವ ಸಂದೇಶಗಳ ಮೂಲಗಳನ್ನು ಪತ್ತೆಹಚ್ಚುವುದು ತುಂಬ ಕಷ್ಟ. ಈ ಹಿನ್ನೆಲೆಯಲ್ಲಿ ಈ ಹಿಂದಿನಿಂದಲೇ ಸರ್ಕಾರ ಕಂಪನಿಗೆ ಎಚ್ಚರಿಸುತ್ತಲೇ ಬಂದಿತ್ತು. ಇದೀಗ ಮತ್ತೆ ಕಂಪನಿಯ ಪ್ರತಿನಿಧಿಗಳೊಂದಿಗೆ ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸಿ ಅವಧಿ ವಿಸ್ತರಿಸಿದೆ.