ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲೇ ದೇಶದಲ್ಲಿ ಮೊಬೈಲ್ ರೋಮಿಂಗ್ ದರ ರದ್ದು? (Mobile | Roaming | Telecom)
Bookmark and Share Feedback Print
 
ಶೀಘ್ರದಲ್ಲೇ ಮೊಬೈಲ್ ಬಳಕೆದಾರರಿಗೊಂದು ಶುಭ ಸುದ್ದಿ ಕಾದಿದೆ. ರಾಜ್ಯದ ಹೊರಗಿರುವ ಸಂದರ್ಭ ಜೇಬಿಗೆ ಭಾರೀ ಕತ್ತರಿ ಬೀಳುವ ರೋಮಿಂಗ್ ದರವನ್ನು ನಿಲ್ಲಿಸುವ ಬಗ್ಗೆ ಭಾರತೀಯ ದೂರಸಂಪರ್ಕ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಸಭೆ ಸೇರಿದ್ದು, ಈ ಬಗ್ಗೆ ಅಂತಿಮವಾಗಿ ವರದಿ ನೀಡಲಿದೆ.

ಸದ್ಯ ಭಾರತವನ್ನು ದೂರಸಂಪರ್ಕ ಇಲಾಖೆ 22 ವೃತ್ತಗಳನ್ನಾಗಿ ವಿಭಾಗಿಸಿದ್ದು, ಈ 22 ವೃತ್ತಗಳಲ್ಲಿ ಒಂದು ವೃತ್ತ ಬಿಟ್ಟು ಮತ್ತೊಂದಕ್ಕೆ ಪ್ರಯಾಣಿಸಿದರೂ, ಪ್ರಯಾಣಿಕ ತನ್ನ ಮೊಬೈಲ್ ಕರೆಗೆ ಹೆಚ್ಚುವರಿ ಕಡಿತಕ್ಕೆ ಒಳಗಾಗಬೇಕಿತ್ತು. ಸದ್ಯ ಇದೇ ಮಾದರಿಯೇ ಬಳಕೆಯಾಗುತ್ತಿದೆ. ಆದರೆ, ಈ ವೃತ್ತಗಳನ್ನು ಕೈಬಿಟ್ಟು, ಭಾರತವನ್ನು ಒಂದೇ ವೃತ್ತದೊಳಗೆ ಪರಿಗಣಿಸುವ ವಿಧಾನ ಸೂಕ್ತ ಎಂದು ಮಂಡಳಿ ಸಲಹೆ ನೀಡಿದೆ.

ಆದರೆ ಈ ಸಲಹೆಗೆ ಇನ್ನೂ ಅಂತಿಮ ನಡೆ ಪ್ರಕಟವಾಗಿಲ್ಲ. ಈ ಬಗ್ಗೆ ಹಲವು ಸಲಹೆ ಸೂಚನೆ ವಾದ ವಿವಾದಗಳು ನಡೆಯುತ್ತಿದೆ. ಜೊತೆಗೆ ಮೊಬೈಲ್ ಕಂಪನಿಗಳು ಈ ನಡೆಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳೂ ದಟ್ಟವಾಗಿವೆ. ಯಾಕೆಂದರೆ, ಮೊಬೈಲ್ ಕಂಪನಿಗಳು ಕೇವಲ ರೋಮಿಂಗ್ ಕರೆಗಳಿಂದಲೇ ವಾರ್ಷಿಕವಾಗಿ 12,000 ಕೋಟಿ ರೂಪಾಯಿಗಳನ್ನು ಗಳಿಸುತ್ತವೆ!
ಸಂಬಂಧಿತ ಮಾಹಿತಿ ಹುಡುಕಿ