ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಕ್ಟೇವಿಯಾ ಸ್ಥಾನಕ್ಕೆ ಸ್ಕೋಡಾದಿಂದ ಹೊಸ ಕಾರು (Octavia | Skoda)
Bookmark and Share Feedback Print
 
ವೋಕ್ಸ್‌ವ್ಯಾಗನ್ ಸಂಸ್ಥೆಗೆ ಸೇರಿದ ಸ್ಕೋಡಾ ಇಂಡಿಯಾ ಸದ್ಯ ಹೊಸ ಕಾರೊಂದನ್ನು ತಯಾರಿಸುತ್ತಿದ್ದು ಇದು ಸೆಡಾನ್ ಮಾದರಿಯ ಆಕ್ಟೇವಿಯಾ ಕಾರಿನ ಸ್ಥಾನವನ್ನು ಅಲಂಕರಿಸಲಿದೆ.

ಈಗಾಗಲೇ ಆಕ್ಟೇವಿಯಾ ಕಾರು ತುಂಬ ಯಶಸ್ಸನ್ನು ಪಡೆದಿದ್ದು, ಇದೇ ಸ್ಥಾನಕ್ಕೆ ಹೊಸ ಕಾರೊಂದನ್ನು ಆವಿಷ್ಕಾರ ಮಾಡುತ್ತಿದ್ದೇವೆ ಎಂದು ಸ್ವತಃ ಸ್ಕೋಡಾ ಇಂಡಿಯಾದ ಮಾರುಕಟ್ಟೆ ವಿಭಾಗದ ನಿರ್ದೇಶಕ ಥಾಮಸ್ ಕ್ಯುಯೆಲ್ ಹೇಳಿದ್ದಾರೆ.

2011ರ ಮಧ್ಯಂತರದ ನಂತರ ಈ ಕಾರು ಬಿಡುಗಡೆಗೊಳಿಸುವ ಚಿಂತನೆಯಿದ್ದು, ಈಗಾಗಲೇ ನಮ್ಮ ಎಂಜಿನಿಯರ್‌ಗಳು ಈ ಕಾರನ್ನು ತಯಾರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದೇ ವೇಳೆ, ಸ್ಕೋಡಾದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಸ್ಕೋಡಾ ಏಟಿ ನಾಲ್ಕು ವಾರಗಳೊಳಗೆ ಬಿಡುಗಡೆಯಾಗಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ