ಐಟಿ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ ತನ್ನ ಎರಡನೇ ತ್ರೈಮಾಸಿಕ ವಿವರವನ್ನು ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಶೇ.13.2ರಷ್ಟು ಏರಿಕೆಯಾಗಿದೆ.
ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗಿನ ಮೂರು ತಿಂಗಳ ಅವಧಿಯಲ್ಲಿ ಸಂಸ್ಥೆಯ ನಿವ್ವಳ ಲಾಭ 17.4 ಬಿಲಿಯನ್ ರೂಪಾಯಿಗಳಿಗೆ (386 ಮಿಲಿಯನ್ ಡಾಲರ್‌ಗಳು) ಏರಿದೆ. ಇದಕ್ಕೂ ಮೊದಲ ವರ್ಷ ಇದೇ ಅವಧಿಯಲ್ಲಿ ಇದು 15.3 ಬಿಲಿಯನ್ ರೂಪಾಯಿಗಳಾಗಿತ್ತು.
ಈ ಅವಧಿಯಲ್ಲಿ ಇನ್ಫೋಸಿಸ್ ಸಂಸ್ಥೆಯ 27 ಗ್ರಾಹಕ ಸಂಸ್ಥೆಗಳು ಏರಿಕೆಯಾಗಿದ್ದು, 7,646 ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.