ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಹಣದುಬ್ಬರವೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನನ್ನ ಸದ್ಯದ ದೊಡ್ಡ ಸವಾಲೆಂದರೆ, ಹಣದುಬ್ಬರವನ್ನು ನಿಗ್ರಹಿಸುವುದು. ಹಣಕಾಸು ಸಚಿವನಾಗಿರುವ ನನಗೀಗ ಅದೇ ದೊಡ್ಡ ಸಮಸ್ಯೆ ಎಂದು ಅವರು ವಿವರಿಸಿದರು.
ಆದರೆ ನಾನು ಸೋತಿದ್ದೇನೆ ಎಂದು ನಾನು ಹೇಳಲ್ಲ. 2009ರಿಂದ ಈಗಿನವರೆಗೆ ಈ ವಲಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ಕೊಂಚ ಮಟ್ಟಿಗೆ ಹಣದುಬ್ಬರ ಇಳಿಸಲು ನೆರವಾಗಿದ್ದೇನೆ ಕೂಡಾ. 2009 ಡಿಸೆಂಬರ್ ತಿಂಗಳಲ್ಲಿ ಶೇ.20ರಷ್ಟಿದ್ದ ಆಹಾರ ಹಣದುಬ್ಬರ ಈಗ ಶೇ.16ಕ್ಕೆ ಇಳಿದಿರುವುದೇ ಇದೇ ಸಾಕ್ಷಿ ಎಂದು ಪ್ರಣಬ್ ವಿವರಿಸಿದರು.
ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ.8.5ರಷ್ಟಿದ್ದು, ಸೆಪ್ಟೆಂಬರ್ ತಿಂಗಳಾಂತ್ಯದ ಅಂತಿಮ ವಾರದಲ್ಲಿ ಆಹಾರ ಹಣದುಬ್ಬರ ಶೇ.16.24ಕ್ಕೇರಿತ್ತು.