ಸೆಪ್ಟೆಂಬರ್ ತಿಂಗಳ ದೇಶದ ಆಹಾರ ಹಾಗೂ ಆಹಾರೇತರ ಒಟ್ಟು ಹಣದುಬ್ಬರ ಶೇ.8.62ಕ್ಕೇರಿದೆ. ಇದಕ್ಕೂ ಮೊದಲ ತಿಂಗಳಲ್ಲಿ ಇದು ಶೇ.8.51ರಲ್ಲಿತ್ತು.
ಆಗಸ್ಟ್ ತಿಂಗಳಲ್ಲಿ ಈ ಹಣದುಬ್ಬರ ಶೇ.8.51ಕ್ಕೇರಿತ್ತು. ಈಗ ಮತ್ತೆ ಇದು ಇದಕ್ಕೂ ಮೇಲೇರಿದ್ದು 8.62ಕ್ಕೆ ತಲುಪಿದೆ.
ಸೆಪ್ಟೆಂಬರ್ ತಿಂಗಳಲ್ಲಿ ತೈಲ ಬೆಲೆಗಳು ಏರಿರುವ ಜೊತೆಗೆ ವಿದ್ಯುತ್ ಬೆಲೆಯೂ ಶೇ.11.06ರಷ್ಟು ಏರಿತ್ತು. ಹಲವು ದಿನಬಳಕೆಯ ವಸ್ತುಗಳ ಬೆಲೆಯೂ ಕೂಡಾ ಶೇ.4.59ರಷ್ಟು ಏರಿಕೆ ಕಂಡಿದೆ. ಆಹಾರ ಹಾಗೂ ಆಹಾರೇತರ ದಿನಬಳಕೆಯ ವಸ್ತುಗಳ ಒಟ್ಟು ಹಣದುಬ್ಬರ ಶೇ.17.45ರಷ್ಟಕ್ಕೆ ಏರಿಕೆಯಾಗಿದೆ.