ಏಷ್ಯಾ ಕರೆನ್ಸಿಗಳ ಎದುರು ಡಾಲರ್ ಮೌಲ್ಯದ ಚೇತರಿಕೆ ಹಾಗೂ ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 13 ಪೈಸೆ ಕುಸಿತವಾಗಿ 44.23 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಅಲ್ಪ ಕುಸಿತವಾಗಿ 25 ತಿಂಗಳ ಗರಿಷ್ಠ 44.10/11 ಡಾಲರ್‌ಗಳಿಗೆ ತಲುಪಿತ್ತು.
ಅಮೆರಿಕದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಹಾಗೂ ಏಷ್ಯಾದ ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ,150.53 ಪಾಯಿಂಟ್‌ಗಳ ಕುಸಿತ ಕಂಡು 19,974.52 ರೂಪಾಯಿಗಳಿಗೆ ತಲುಪಿದೆ.